ಕರ್ನಾಟಕ

karnataka

ETV Bharat / bharat

ಪುಲ್ವಾಮ ದಾಳಿಗೆ ಗುಪ್ತಚರದ ವೈಫಲ್ಯವೇ ಕಾರಣ: ಕೇಂದ್ರ, ದೋವಲ್​ ವಿರುದ್ಧ ದೀದಿ ಕಿಡಿ - ಗುಪ್ತಚರ ವೈಫಲ್ಯ

ಪುಲ್ವಾಮ ದಾಳಿ ನಡೆಯಲು ಗುಪ್ತಚರ ದಳದ ವೈಫಲ್ಯವೇ ಕಾರಣ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

By

Published : Feb 16, 2019, 2:25 PM IST

ಕೋಲ್ಕತ್ತಾ: ಪುಲ್ವಾಮದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಗುಪ್ತಚರ ದಳದ ವೈಫಲ್ಯವೇ ಕಾರಣ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಹಾಗೂ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ವಿರುದ್ಧ ಕಿಡಿ ಕಾರಿದ್ದಾರೆ.

ದೆಹಲಿಯಿಂದ ಹಿಂದಿರುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆ ದೊಡ್ಡ ದುರಂತ. ಇದೆಲ್ಲಾ ಹೇಗಾಯ್ತು? ರಾಷ್ಟ್ರೀಯ ಭದ್ರತಾ ಸಲಹೆಗಾರ (ಅಜಿತ್​ ದೋವಲ್​) ಏನು ಮಾಡುತ್ತಿದ್ದರು? ಎಲ್ಲಿ ತಪ್ಪಾಗಿದೆ ಎಂದು ನಮಗೆ ತಿಳಿಯಬೇಕಿದೆ ಎಂದು ಆಗ್ರಹಿಸಿದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ದಾಳಿ ನಡೆಯುವುದಕ್ಕೂ ಮುನ್ನ ಸೇನೆಗೆ ಏಕೆ ಈ ಮಾಹಿತಿ ತಿಳಿಯಲಿಲ್ಲ? ಹಲವು ಸೈನಿಕರು ಹುತಾತ್ಮರಾಗುವಂತಾಗಿದ್ದು ಏಕೆ? ಇದು ನನ್ನೊಬ್ಬಳ ಪ್ರಶ್ನೆಯಲ್ಲ, ದೇಶದ ಜನರ ಪ್ರಶ್ನೆ ಎಂದು ಸಮರ್ಥಿಸಿಕೊಂಡರು.

ಪ್ರಧಾನ ಮಂತ್ರಿಗಳು ಶುಕ್ರವಾರ ಒಂದು ಯೋಜನೆಯನ್ನು ಉದ್ಘಾಟನೆ ಮಾಡಿದ್ದಾರೆ. ಇಂತಹ ಗಂಭೀರ ಘಟನೆಗಳು ನಡೆದಾಗ ರಾಜಕೀಯದ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು. ಅಲ್ಲದೆ, ಅವರೇಕೆ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಿಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.

2016ರ ಉರಿ ದಾಳಿಯ ನಂತರದ ಬಹುದೊಡ್ಡ ದಾಳಿಯಿದು. ಇದರಲ್ಲಿ ರಾಜಕೀಯ ಮಾಡಬಾರದು. ದೇಶದ ಜನತೆಗೆ ಜೊತೆಗೆ ನಾವು ಸದಾ ಇರುತ್ತೇವೆ ಎಂದರು.

ABOUT THE AUTHOR

...view details