ನವದೆಹಲಿ: ದೇಶಾದ್ಯಂತ ಲಾಕ್ಡೌನ್ ಮುಂದುವರಿಕೆಯಾಗಿರುವ ಕಾರಣ ಸಾರ್ವಜನಿಕ ಬಸ್ ಸೇವೆ ಸಂಪೂರ್ಣವಾಗಿ ಬಂದ್ ಆಗಿದೆ. ಹೀಗಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ತೊಂದರೆ ಅನುಭವಿಸುತ್ತಿದ್ದು, ಇದೀಗ ಕೇಂದ್ರ ಸಾರಿಗೆ ಸಚಿವ ಮಹತ್ವದ ಸುಳಿವು ಬಿಚ್ಚಿಟ್ಟಿದ್ದಾರೆ.
ಕೆಲ ಮಾರ್ಗಸೂಚಿಯೊಂದಿಗೆ ದೇಶದಲ್ಲಿ ಆದಷ್ಟು ಬೇಗ ಸಾರಿಗೆ ಸೇವೆ ಆರಂಭ: ಗಡ್ಕರಿ ಸುಳಿವು! - ದೇಶದಲ್ಲಿ ಸಾರಿಗೆ ಸೇವೆ
ದೇಶಾದ್ಯಂತ ಲಾಕ್ಡೌನ್ ಮುಂದುವರೆದಿರುವ ಕಾರಣ ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ.
ಹೊಸ ಗೈಡ್ಲೈನ್ಸ್ಗಳೊಂದಿಗೆ ದೇಶದಲ್ಲಿ ಸಾರಿಗೆ ಆರಂಭ ಮಾಡುವುದಾಗಿ ಅವರು ಹೇಳಿದ್ದು, ಅತಿ ಶೀಘ್ರದಲ್ಲೇ ಸಾರಿಗೆ ಸಂಚಾರ ಹಾಗೂ ವಿಮಾನಯಾನ ಪುನಾರಂಭಗೊಳ್ಳಲಿದೆ ಎಂದಿದ್ದಾರೆ. ದೇಶದಲ್ಲಿ ಇದೀಗ 3.0 ಲಾಕ್ಡೌನ್ ಜಾರಿಯಲ್ಲಿದ್ದು, ಕೆಲವೊಂದು ಸಡಿಲಿಕೆ ನೀಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿಗಳೊಂದಿಗೆ ಆದಷ್ಟು ಬೇಗ ಬಸ್ ಪ್ರಾರಂಭಿಸುವ ಪ್ರಯತ್ನ ನಡೆಸಲಾಗುವುದು ಎಂದಿದ್ದಾರೆ. ದೇಶ ಹಾಗೂ ವಿದೇಶದ ವಿವಿಧ ಕಡೆ ಜನರು ಸಿಲುಕಿಕೊಂಡಿರುವ ಕಾರಣ ಸಾರಿಗೆ ಪ್ರಾರಂಭ ಮಾಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ದೇಶದಲ್ಲಿ ಮಾರ್ಚ್ 25 ರಿಂದಲೂ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಸಾರ್ವಜನಿಕ ಸಾರಿಗೆ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕೆಲವೊಂದು ರಾಜ್ಯಗಳಿಗೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನ ಬಿಡಲು ಬಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಹಸಿರು ಹಾಗೂ ಆರೆಂಜ್ ಪ್ರದೇಶಗಳಲ್ಲಿ ಕೆಲ ನಿಯಮಗಳೊಂದಿಗೆ ಬಸ್, ಕ್ಯಾಬ್ಗಳ ಸಂಚಾರ ಆರಂಭಗೊಂಡಿದೆ.