ನವದೆಹಲಿ:ನಗರದ ಜಿಮ್ ಕೇಂದ್ರಗಳನ್ನು ಮತ್ತೆ ತೆರೆಯಲು ಅನುಮತಿ ಕೋರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸುತ್ತಿದ್ದ 12 ಜಿಮ್ ಮಾಲೀಕರನ್ನು ದೆಹಲಿಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಜಿಮ್ ಮಾಲೀಕರ ಬಂಧನ ದೆಹಲಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಜಿಮ್ ಕೇಂದ್ರಗಳಿಂದ ಬರುವ ಆದಾಯವನ್ನೇ ನಂಬಿದ್ದಾರೆ. ಜಿಮ್ ಮುಚ್ಚಿದ್ದರಿಂದ ಇವರ ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಹಾಗಾಗಿ ಜಿಮ್ಗಳನ್ನು ಮತ್ತೆ ತೆರೆಯುವಂತೆ ನಾವು ಲೆಫ್ಟಿನೆಂಟ್ ಗವರ್ನರ್ಗೆ ವಿನಂತಿಸಲು ಬಂದಿದ್ದೆವು. ಆದರೆ, ಪೊಲೀಸರು ನಮ್ಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು 4,000 ಸಣ್ಣ ಮತ್ತು ಮಧ್ಯಮ ಉದ್ಯಮಿಗಳನ್ನು ಒಳಗೊಂಡಿರುವ ದೆಹಲಿ ಜಿಮ್ ಅಸೋಸಿಯೇಶನ್ ಉಪಾಧ್ಯಕ್ಷ ಚಿರಾಗ್ ಸೇಥಿ ತಮ್ಮ ನೋವು ತೋಡಿಕೊಂಡರು.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುಮಾರು 12 ಜನರನ್ನು ವಶಕ್ಕೆ ಪಡೆದಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ COVID-19 ಪರಿಶೀಲನಾ ಸಭೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೋಟೆಲ್ ಮತ್ತು ಮಾರುಕಟ್ಟೆಗಳನ್ನು ಪುನಃ ತೆರೆಯಲು ಅನುಮೋದನೆ ನೀಡಿದೆ. ಆದರೆ, ಜಿಮ್ಗಳನ್ನು ಮರುಪ್ರಾರಂಭಿಸಲು ಅನುಮತಿಸಲಿಲ್ಲ. ಸರ್ಕಾರ ಜಿಮ್ಗಳನ್ನು ನಿರ್ಲಕ್ಷಿಸಿದೆ.
ಪ್ರತಿಭಟನೆ ನಡೆಸುತ್ತಿದ್ದ ಜಿಮ್ ಮಾಲೀಕರ ಬಂಧನ ದೆಹಲಿಯಲ್ಲಿ ಸರಿಸುಮಾರು 5,500 ಜಿಮ್ಗಳಿವೆ. ಅವರ ಜೀವನೋಪಾಯಕ್ಕೆ ಧಕ್ಕೆಯುಂಟಾಗಿದೆ. ಫಿಟ್ನೆಸ್ ತರಬೇತುದಾರರು, ಕಾರ್ಯನಿರ್ವಾಹಕರು, ಕ್ಲೀನರ್ಗಳು, ಸಹಾಯಕರು, ಸಲಕರಣೆಗಳ ಮಾರಾಟಗಾರರು ಮತ್ತು ಮನೆಗೆಲಸದ ಸಿಬ್ಬಂದಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ನೆರೆಯ ರಾಜ್ಯಗಳಲ್ಲಿನ ಜಿಮ್ಗಳನ್ನು ಮತ್ತೆ ತೆರೆಯಲು ಅನುಮತಿಸಲಾಗಿದೆ. ಆದರೆ, ಇಲ್ಲಿ ಮಾತ್ರ ತೆರೆಯಲು ಅನುಮತಿ ನೀಡುತ್ತಿಲ್ಲ ಎಂದು ಜಿಮ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.