ನವದೆಹಲಿ: ಬಹಳ ವರ್ಷಗಳ ನಂತರ ರಾಜಕಾರಣಕ್ಕೆ ಧುಮುಕಿ, ಕಾಂಗ್ರೆಸ್ನ ಭರವಸೆ ಎನಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ ಮೊದಲ ಟ್ವೀಟ್ ಸಾಕಷ್ಟು ಸುದ್ದಿಯಾಗಿದೆ.
ನಿನ್ನೆ ಅಹ್ಮದಾಬಾದ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ನಂತರ ಅವರು ಟ್ವೀಟ್ ಮಾಡಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ನಂತರ ಇದೇ ಅವರ ಮೊದಲ ಟ್ವೀಟ್ ಆಗಿದೆ.
1930ರಲ್ಲಿ ಮಹಾತ್ಮ ಗಾಂಧಿ ನಡೆಸಿದ ದಂಡಿ ಸತ್ಯಾಗ್ರಹ ಸ್ಮರಣಾರ್ಥ ಕಾಂಗ್ರೆಸ್ ದಂಡು ಗುಜರಾತ್ನ ಸಬರಿಮತಿ ಆಶ್ರಮಕ್ಕೆ ಭೇಟಿ ನೀಡಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, ಸಬರಮತಿಯ ಸರಳ ಘನತೆ; ಅಲ್ಲಿ ಸತ್ಯ ಇನ್ನೂ ಜೀವಿಸಿದೆ ಎಂದು ಹೇಳಿದ್ದಾರೆ.