ವಾರಣಾಸಿ: ಮೋದಿ ಲೋಕಸಭೆ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಕಾಶಿ ವಿಶ್ವನಾಥ ಸನ್ನಿಧಿಗೆ ಭೇಟಿ ನೀಡಲು ಅವಕಾಶ ನೀಡಬಾರದು ಎಂದು ವಕೀಲರ ಗುಂಪು ಇಲ್ಲಿನ ಜಿಲ್ಲಾಡಳಿಕ್ಕೆ ಆಗ್ರಹಿಸಿದೆ.
ಪ್ರಚಾರದಲ್ಲಿ ನಿರತರಾಗಿರುವ ಪ್ರಿಯಾಂಕಾ ಹಲವು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಅಂತೆಯೇ ಅವರು ಕಾಶಿ ವಿಶ್ವನಾಥನ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡಬಾರದು ಎಂದು ವಕೀಲರ ಗುಂಪು ಆಗ್ರಹಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಹ ಸಲ್ಲಿಸಿದೆ.