ನವದೆಹಲಿ: ಬಿಜೆಪಿ ಹಿರಿಯನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಂದನೇ ವರ್ಷದ ಪುಣ್ಯ ತಿಥಿ ಅಂಗವಾಗಿ ಬಿಜೆಪಿ ನಾಯಕರು ವಾಜಪೇಯಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಅಟಲ್ ಜೀ ಅಗಲಿಕೆಗೆ ಒಂದು ವರ್ಷ... ಅಜಾತ ಶತ್ರುವಿಗೆ ಬಿಜೆಪಿ ನಾಯಕರಿಂದ ನಮನ - ಅಟಲ್ ಬಿಹಾರಿ ವಾಜಪೇಯಿ
ವಾಜಪೇಯಿ ಅವರ ಒಂದನೇ ವರ್ಷದ ಪುಣ್ಯತಿಥಿ ಅಂಗವಾಗಿ ಫ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಅಜಾತ ಶತ್ರುವಿಗೆ ಬಿಜೆಪಿ ನಾಯಕರಿಂದ ನಮನ
ನವದೆಹಲಿಯ ಸದೈವ ಅಟಲ್ ನಲ್ಲಿರುವ ವಾಜಪೇಯಿ ಅವರ ಸಮಾಧಿಗೆ ಆಗಮಿಸಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಮಾಜಿ ಪ್ರಧಾನಿಗೆ ನಮನ ಸಲ್ಲಿಸಿದರು.
ಇದೇ ವೇಳೆ ವಾಜಪೇಯಿ ಅವರ ಮೊಮ್ಮಗಳು ನಿಹಾರಿಕ ಅವರನ್ನ ಬಿಜೆಪಿ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರು ಕಳೆದ ವರ್ಷ ಆಗಸ್ಟ್ 16 ರಂದು ಇಹಲೋಕ ತ್ಯಜಿಸಿದ್ದರು.