ನವದೆಹಲಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 20ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, 19 ವರ್ಷದ ಹಳೆ ನೆನಪಿಗೆ ಜಾರಿದ್ದಾರೆ.
ಈ ಹಿಂದಿನ ರಷ್ಯಾ ಭೇಟಿ ಬಗ್ಗೆ ನೆನಪು ಮಾಡಿಕೊಂಡಿರುವ ಮೋದಿ ಟ್ವಿಟ್ಟರ್ನಲ್ಲಿ ಫೋಟೊವೊಂದನ್ನ ಶೇರ್ ಮಾಡಿದ್ದಾರೆ. '2001 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ರಷ್ಯಾಗೆ ಭೇಟಿ ನೀಡಿದ್ದೆ. ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ವಾಜಪೇಯಿ ಅವರ ನಿಯೋಗದಲ್ಲಿ ನಾನು ಕೂಡ ಭಾಗವಹಿಸಿದ್ದೆ' ಎಂದು ಟ್ಟಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಸಧ್ಯ ಮೂರು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಭಾರತ-ರಷ್ಯಾ ಸಂಬಂಧ ಮತ್ತೊಂದು ಹಂತ ತಲುಪಲಿದೆ ಎಂದಿದ್ದ , ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಆಂತರಿಕ ವಿಚಾರದಲ್ಲಿ ಮೂರನೇ ದೇಶದ ಮಧ್ಯಪ್ರವೇಶ ವಿಚಾರದಲ್ಲಿ ಭಾರತ-ರಷ್ಯಾ ಎರಡೂ ದೇಶಗಳು ಒಂದೇ ನಿಲುವನ್ನು ಹೊಂದಿದೆ. ಉಭಯ ದೇಶಗಳು ಆಂತರಿಕ ಸಮಸ್ಯೆ ಬಗೆಹರಿಸಲು ಮತ್ತೊಂದು ರಾಷ್ಟ್ರದ ಪಾತ್ರವನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ.