ಹೈದರಾಬಾದ್: ಭಾರಿ ಸುದ್ದಿಗೆ ಗ್ರಾಸವಾಗಿದ್ದ ಕೇರಳ ಆನೆ ಸಾವಿನ ಪ್ರಕರಣದ ಆರೋಪಿಯ ಬಗ್ಗೆ ಮಾಹಿತಿ ನೀಡಿದರೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ತೆಲಂಗಾಣದ ವ್ಯಕ್ತಿಯೊಬ್ಬರು ಘೋಷಣೆ ಮಾಡಿದ್ದಾರೆ.
ಆನೆ ಸಾವಿಗೆ ಕಾರಣರಾದವರ ಮಾಹಿತಿ ನೀಡಿದರೆ 2 ಲಕ್ಷ ರೂ. ಬಹುಮಾನ! - 2 ಲಕ್ಷ ರೂಪಾಯಿ ಬಹುಮಾನ
ಇಡೀ ದೇಶ ಮಮ್ಮಲ ಮರುಗುವಂತೆ ಮಾಡಿದ್ದ ಕೇರಳದ ಆನೆ ಕೊಂದ ಆರೋಪಿ ಬಗ್ಗೆ ಮಾಹಿತಿ ನೀಡಿದ್ರೆ 2 ಲಕ್ಷ ರೂ. ನೀಡುವುದಾಗಿ ತೆಲಂಗಾಣದ ವ್ಯಕ್ತಿಯೊಬ್ಬರು ಘೋಷಿಸಿದ್ದಾರೆ.
ಕೇರಳದ ಆನೆ ಸಾವಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದ್ರೆ 2 ಲಕ್ಷ ಬಹುಮಾನ!
ಮೆಡ್ಚಲ್ ಜಿಲ್ಲೆಯ ನಿವೃತ್ತ ಉದ್ಯೋಗಿ ಶ್ರೀನಿವಾಸ್ ಎಂಬುವವರು ಈ ಆಫರ್ ನೀಡಿದ್ದಾರೆ. ಈ ಘಟನೆ ಮಾನವೀಯತೆಯನ್ನು ಪ್ರಶ್ನಿಸುವಂತಿದೆ. ಆಹಾರದಲ್ಲಿ ಪಟಾಕಿಯನ್ನಿಟ್ಟು ಆನೆಯ ಸಾವಿಗೆ ಕಾರಣರಾದ ಮಾನವ ಮೃಗಗಳು ಭೂಮಿಯ ಮೇಲೆ ಇರುವುದು ಅತ್ಯಂತ ನೋವಿನ ವಿಚಾರ ಎಂದಿದ್ದಾರೆ.
ಆಹಾರ ಅರಿಸಿ ನಾಡಿಗೆ ಬಂದಿದ್ದ ಆನೆಗೆ ಸ್ಫೋಟಕ ತುಂಬಿದ್ದ ಅನಾನಸ್ ನೀಡಲಾಗಿತ್ತು. ಇದನ್ನು ತಿನ್ನುತ್ತಿದ್ದಂತೆ ಆನೆಯ ಬಾಯಿಯಲ್ಲಿ ಸ್ಫೋಟವಾಗಿ ಗಾಯಗೊಂಡಿತ್ತು. ಬಳಿಕ ನೋವು ತಾಳಲಾರದೆ ಆನೆ ಮೃತಪಟ್ಟಿದ್ದ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿತ್ತು.