ಶ್ರೀನಗರ (ಜಮ್ಮು-ಕಾಶ್ಮೀರ):ಸುಮಾರು 70 ದಿನಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಸ್ಥಗಿತಗೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಪುನಾರಂಭವಾಗಿದೆ.
ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದತಿ ಬಳಿಕ ಮೊಬೈಲ್ ಸಂಪರ್ಕ ಸೇವೆಯನ್ನು ಕಡಿತಗೊಳಿಸಲಾಗಿತ್ತು. ಇಂದು ರಾಜ್ಯ ಸಂಚಾಲಿತ ಬಿಎಸ್ಎನ್ಎಲ್ ನೆಟ್ವರ್ಕ್ನಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಪುನಾರಂಭವಾಗಿದೆ. ಆದರೆ ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆ ಮೇಲಿನ ನಿಷೇಧವನ್ನು ಮುಂದುವರೆಸಲಾಗಿದೆ.