ಇಂಧೋರ್ (ಮಧ್ಯಪ್ರದೇಶ):ಹಸುವನ್ನ ಹಿಂದೂಗಳು ಅತ್ಯಂತ ಶ್ರದ್ಧೆಯಿಂದಲೇ ಪೂಜಿಸ್ತಾರೆ. ಆದರೆ, ಅದೇ ಹಸುವನ್ನೂ ಈಗ ಚುನಾವಣಾ ಪ್ರಚಾರಕ್ಕೂ ಬಳಸಿಕೊಳ್ಳಲಾಗ್ತಿದೆ.
ಉಪಚುನಾವಣೆಗೆ ಭಾರಿ ಸಿದ್ಧತೆ.. ಹಸು ಬಳಸಿಕೊಂಡು ಪ್ರಚಾರ - ಮಧ್ಯಪ್ರದೇಶ ಚುನಾವಣೆ
ಉಪಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಕಣಕ್ಕಿಳಿದಿವೆ. ಜನರ ಮತ ಸೆಳೆಯುವ ಉದ್ದೇಶದಿಂದ ಧಾರ್ಮಿಕ ಭಾವನೆ ಆಧಾರದ ಮೇಲೆ ಹಸುವನ್ನು ಬಳಕೆ ಮಾಡಿಕೊಂಡು ಪ್ರಚಾರ ಮಾಡಲಾಗುತ್ತಿದೆ..
ಹಸು ಬಳಸಿಕೊಂಡು ಪ್ರಚಾರ ಕಾರ್ಯ
ಹಸುವಿನ ಮೇಲೆ ಅಭ್ಯರ್ಥಿ ಹೆಸರು ಹಾಗೂ ಚಿಹ್ನೆ ಬರೆದು ಪ್ರಚಾರ ಮಾಡಲಾಗುತ್ತಿದೆ.ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಲು ನಾನಾ ಕಸರತ್ತನ್ನು ಮಾಡುತ್ತಾರೆ. ಅದರ ಮುಂದುವರೆದ ಭಾಗವಾಗಿ ಮೂಕ ಪ್ರಾಣಿ ಹಸುವನ್ನೂ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗ್ತಿದೆ. ಇದಕ್ಕೆ ಪರ ವಿರೋಧದ ಚರ್ಚೆಯೂ ನಡೆಯುತ್ತಿದೆ.
ಇಂಧೋರ್‌ನ ವಿಧಾನಸಭೆಯ ಉಪಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಕಣಕ್ಕಿಳಿದಿವೆ. ಭಾರೀ ಪ್ರಚಾರ ಕೈಗೊಂಡಿವೆ. ಅದರಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ರಾಜ್ಯದ 27 ಸ್ಥಾನಗಳಲ್ಲಿನ ಉಪಚುನಾವಣೆಗೆ ಸಿದ್ಧತೆಗಳು ನಡೆದಿವೆ.