ಕರ್ನಾಟಕ

karnataka

ETV Bharat / bharat

ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ತಂದಿರುವ ಸಾರಿಗೆ ನೀತಿ ಸರಿ ಇಲ್ಲ: ಕೇಂದ್ರದ ವಿರುದ್ಧ ಚಿದಂಬರಂ ಗರಂ - ವಲಸೆ ಕಾರ್ಮಿಕರಿಗಾಗಿ ತಂದಿರುವ ಸಾರಿಗೆ ನೀತಿ ಕಳಪೆ

ಕೇಂದ್ರ ಸರ್ಕಾರ ಸಾರಿಗೆ ನೀತಿ-ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನವೇ ಸಾವಿರಾರು ವಲಸೆ ಕಾರ್ಮಿಕರು ತವರೂರು ಕಡೆ ಪ್ರಯಾಣ ಆರಂಭಿಸಿದ್ದರು. ಈ ಕುರಿತು ಎರಡು ದಿನಗಳ ಹಿಂದೆಯೇ ಕೇಂದ್ರಕ್ಕೆ ಸೂಚಿಸಿದ್ದೆ. ಕಾರ್ಮಿಕರು ಕಾಲ್ನಡಿಗೆ ಮೂಲಕ ಊರಿಗೆ ಹೋಗುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೆ ಎಂದು ಹೇಳಿದ್ದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.

Chidambaram
ಪಿ.ಚಿದಂಬರಂ

By

Published : May 8, 2020, 10:21 PM IST

ನವದೆಹಲಿ:ವಲಸೆ ಕಾರ್ಮಿಕರನ್ನು ಸಾಗಿಸುವ ಬಸ್​ ಮತ್ತು ರೈಲುಗಳನ್ನು ಒದಗಿಸುವ ಸಾರಿಗೆ ನೀತಿಯನ್ನು ಸರಿಯಾಗಿ ವಿನ್ಯಾಸ ಮತ್ತು ಸಮನ್ವಯಗೊಳಿಸಿಲ್ಲ. ಅದು ಕಳಪೆಯಿಂದ ಕೂಡಿದೆ. ಆದರೂ ಜಾರಿಗೊಳಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಲಕ್ಷಾಂತರ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಒದಗಿಸುವ ನಿರ್ಧಾರ ಕೈಗೊಂಡಿದ್ದೇ ವಿಳಂಬವಾಗಿ. ಅದರಲ್ಲೂ ಕಳಪೆಯಾದ ನೀತಿಯನ್ನೇ ಜಾರಿಗೆ ತಂದಿದ್ದಾರೆ. ಈ ನೀತಿಯಿಂದಾಗಿ ಹಳಿಗಳ ಮೇಲೆ ಮಲಗಿದ್ದ 14 ಕಾರ್ಮಿಕರ ಮೇಲೆ ಮಹಾರಾಷ್ಟ್ರದ ರಂಗಾಬಾದ್‌ನಲ್ಲಿ ರೈಲು ಹರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾರಿಗೆ ನೀತಿಯನ್ನು ಸರಿಯಾಗಿ ಯೋಜಿಸದೆ, ಸಮನ್ವಯಗೊಳಿಸದೆ ಕಾರ್ಯ ರೂಪಕ್ಕೆ ತರಲಾಗಿದೆ. ಇದೊಂದು ಹತಾಶೆಯ ಭಾಗ. ಅಲ್ಲದೆ, ಕಾರ್ಮಿಕರಿಗೆ ಯಾವುದೇ ರೀತಿ ರಕ್ಷಣೆ ಒದಗಿಸಿಲ್ಲ. ಅದರ ಪರಿಣಾಮವೇ ಇಂದು ಬೆಳಗ್ಗೆ ದುರಂತ ಸಂಭವಿಸಲು ಕಾರಣ ಎಂದು ಕಿಡಿಕಾರಿದರು.

ABOUT THE AUTHOR

...view details