ನವದೆಹಲಿ:ರಕ್ಕಸ ಕೊರೊನಾ ವಿರುದ್ಧ ಭಾರತ ಒಗ್ಗಟ್ಟಿನಿಂದ ಹೋರಾಟ ನಡೆಸಿದೆ. ಇದರ ಮಧ್ಯೆ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆ ಲೈಟ್ ಆಫ್ ಮಾಡಿ ಮೊಂಬತ್ತಿ, ಹಣತೆ, ಮೊಬೈಲ್ ಟಾರ್ಚ್ ಬೆಳಗಿಸುವಂತೆ ನಮೋ ಕರೆ ನೀಡಿದ್ದಾರೆ.
9ಗಂಟೆಗೆ 9 ನಿಮಿಷ: ಒಗ್ಗಟ್ಟು ಪ್ರದರ್ಶಿಸಲು ನಮೋ ಮತ್ತೊಮ್ಮೆ ಕರೆ - ಪ್ರಧಾನಿ ನರೇಂದ್ರ ಮೋದಿ
ಮಾರಕ ಸೋಂಕು ಕೊರೊನಾ ವಿರುದ್ಧ ಭಾರತ ಹೋರಾಟ ನಡೆಸಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಬಳಿ ಮೊಂಬತ್ತಿ ಬೆಳಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದೆ.
PM tweets #9pm9minute
ದೀಪ ಬೆಳಗಿಸುವುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಟ್ವೀಟ್ ಮಾಡಿ ದೇಶದ ಜನರ ಬಳಿ ಮತ್ತೆ ಮನವಿ ಮಾಡಿಕೊಂಡಿದ್ದಾರೆ.
ಡೆಡ್ಲಿ ವೈರಸ್ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ ಸಾವಿರ ಗಡಿ ದಾಟಿದೆ. ಜತೆಗೆ ಸಾವನ್ನಪ್ಪಿದವರ ಸಂಖ್ಯೆ 70 ದಾಟಿದೆ.