ಭೋಪಾಲ್ (ಮಧ್ಯಪ್ರದೇಶ): ಏಷ್ಯಾದ ಅತಿ ದೊಡ್ಡ 750 ಮೆಗಾ ವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ಸ್ಥಾವರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಜುಲೈ 10ರಂದು ಮಧ್ಯಪ್ರದೇಶದಲ್ಲಿ ಏಷ್ಯಾದ ಅತಿ ದೊಡ್ಡ 750 ಮೆಗಾ ವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ಸ್ಥಾವರವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ.
modi
ಮಧ್ಯಪ್ರದೇಶದಲ್ಲಿರುವ ಈ ಸೌರ ಸ್ಥಾವರವನ್ನು ಜುಲೈ 10ರಂದು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.
ಚೌವ್ಹಾಣ್ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.