ನವದೆಹಲಿ:ಇಂದು ನಡೆಯಲಿರುವ ಐಐಟಿ 2020 ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಭಾಷಣ ಮಾಡಲಿದ್ದಾರೆ. ‘ಫ್ಯೂಚರ್ ಈಸ್ ನೌ’ ಎಂಬ ವಿಷಯದ ಕುರಿತು ಪಾನ್ ಐಐಟಿ ಯುಎಸ್‌ಎ ಆಯೋಜಿಸಿರುವ ಶೃಂಗಸಭೆಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.
ಐಐಟಿ ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ
ಪಾನ್ ಐಐಟಿ ಯುಎಸ್‌ಎ ಆಯೋಜಿಸಿರುವ ಜಾಗತಿಕ ಐಐಟಿ 2020 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಈ ಕುರಿತು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ
ಈ ಸಭೆಯಲ್ಲಿ ಜಾಗತಿಕ ಆರ್ಥಿಕತೆ, ತಂತ್ರಜ್ಞಾನ, ನಾವೀನ್ಯತೆ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸಾರ್ವತ್ರಿಕ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಪಾನ್ ಐಐಟಿ ಯುಎಸ್‌ಎ ಎಂಬುದು 20 ವರ್ಷಕ್ಕಿಂತ ಹಳೆಯದಾದ ಒಂದು ಸಂಸ್ಥೆಯಾಗಿದೆ. 2003ರಿಂದ ಇಂತಹ ಸಮ್ಮೇಳನವನ್ನು ಆಯೋಜಿಸಿದೆ ಮತ್ತು ಉದ್ಯಮ, ಅಕಾಡೆಮಿ ಹಾಗೂ ಸರ್ಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ಭಾಷಣಕಾರರನ್ನು ಶೃಂಗಸಭೆಗೆ ಆಹ್ವಾನಿಸಿದೆ.