ನವದೆಹಲಿ: ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ವರ್ಧಮಾನ್‌ರನ್ನ ಬಿಡುಗಡೆ ಮಾಡಿರದಿದ್ರೇ, ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ್ದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತವರು ರಾಜ್ಯ ಗುಜರಾತ್ನ ಪಠಾಣ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರದ್ರೇ, ಆ ದೇಶಕ್ಕೆ ಖತಲ್ ಕೀ ರಾತ್ (ಸಾವಿನ ರಾತ್ರಿ)ಯಾಗಿರುತ್ತಿತ್ತು. 'ಅಭಿನಂದನ್ ಅವರನ್ನು ಪಾಕ್ ವಶಕ್ಕೆ ಪಡೆದ ಬಳಿಕ ಭಾರತ 12 ಕ್ಷಿಪಣಿಗಳನ್ನು ರೆಡಿಯಾಗಿಟ್ಟುಕೊಂಡಿತ್ತು. ಪರಿಸ್ಥಿತಿ ಮಿತಿ ಮೀರಿದ್ರೇ ಪಾಕ್ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೆ, ಬಂಧಿಸಿದ ಎರಡನೇ ದಿನ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕ್ ಘೋಷಿಸಿತು. ಇಲ್ಲದಿದ್ದರೆ 'ಖತಾಲ್ ಕೀ ರಾತ್' ನಡೆಯುತ್ತಿತ್ತು' ಎಂದು ಅಮೆರಿಕಾದ ಉನ್ನತ ಅಧಿಕಾರಿಯೋರ್ವರು ಹೇಳಿದ್ದನ್ನೇ ಇವತ್ತು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.