ನವದೆಹಲಿ: ನೂತನ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಳ್ಳಬೇಕು ಎಂದು ರೈತರು, ವಿಪಕ್ಷಗಳು ಆಗ್ರಹಿಸಿವೆ.
ಕೇಂದ್ರ ಸರ್ಕಾರ ಹಠಮಾರಿ ಮನಸ್ಥಿತಿಯಿಂದ ರೈತರ ಸಮಸ್ಯೆ ಪರಿಹರಿಸುವ ನಾಟಕ ಮಾಡ್ತಿದೆ: ಕಾಂಗ್ರೆಸ್ ಆರೋಪ
ಕೇಂದ್ರ ಸರ್ಕಾರ ಅಹಂಕಾರಿ ಮತ್ತು ಹಠಮಾರಿ ಮನಸ್ಥಿತಿಯಿಂದ ಸಮಸ್ಯೆ ನಿವಾರಿಸಲು ಯತ್ನಿಸುತ್ತಿದೆ. ಪ್ರಧಾನಿ ಮೋದಿ ಹಾಗೂ ಕೃಷಿ ಸಚಿವರಿಗೆ ರೈತರ ಬೇಡಿಕೆ ಈಡೇರಿಸಬೇಕೆಂಬುದಿಲ್ಲ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಸಂಸದ ಎ.ಆರ್.ಚೌಧರಿ ಹರಿಹಾಯ್ದಿದ್ದಾರೆ.
ಚೌಧರಿ
ಈ ಮಧ್ಯೆ ಮಾತನಾಡಿರುವ ಕಾಂಗ್ರೆಸ್ ಸಂಸದ ಎ.ಆರ್.ಚೌಧರಿ, ಕೇಂದ್ರ ಸರ್ಕಾರ ಅಹಂಕಾರಿ ಮತ್ತು ಹಠಮಾರಿ ಮನಸ್ಥಿತಿಯಿಂದ ಸಮಸ್ಯೆ ನಿವಾರಿಸಲು ಯತ್ನಿಸುತ್ತಿದೆ. ಪ್ರಧಾನಿ ಮೋದಿ ಹಾಗೂ ಕೃಷಿ ಸಚಿವರಿಗೆ ರೈತರ ಬೇಡಿಕೆ ಈಡೇರಿಸಬೇಕು ಎಂಬ ಮನಸ್ಥಿತಿಯಿಲ್ಲ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ನಿನ್ನೆಯಷ್ಟೇ, ಬಜೆಟ್ ಅಧಿವೇಶನದ ಮೊದಲ ದಿನದ ರಾಷ್ಟ್ರಪತಿ ಭಾಷಣವನ್ನು 19 ವಿಪಕ್ಷಗಳು ಬಹಿಷ್ಕರಿಸಿ, ರೈತರಿಗೆ ಬೆಂಬಲ ಸೂಚಿಸಿದ್ದವು.