ನವದೆಹಲಿ: ಪಾಕ್ ಸೇನೆಗೆ ಸೆರೆಯಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ 48 ಗಂಟೆಯೊಳಗೆ ಭಾರತಕ್ಕೆ ಮರಳಲು ಆರ್ಎಸ್ಎಸ್ ಸ್ವಯಂಸೇವಕ (ಪ್ರಧಾನಿ ಮೋದಿ)ನ ಪರಾಕ್ರಮವೇ ಕಾರಣ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
RSS ಸ್ವಯಂಸೇವಕನ ಪರಾಕ್ರಮದಿಂದಲೇ ಅಭಿನಂದನ್ ವಾಪಸ್: ಸ್ಮೃತಿ ಹೇಳಿದ್ದು ಯಾರಿಗೆ?
ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಲು ಪ್ರಧಾನಿ ಮೋದಿ ಪರಾಕ್ರಮವೇ ಕಾರಣ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ
ಕೇಂದ್ರ ಸಚಿವೆ ಸ್ಮೃತಿ ಇರಾನಿ
ಅಭಿನಂದನ್ ಭಾರತಕ್ಕೆ ವಾಪಸ್ಸಾಗುವ ಮುನ್ನ ಮಾತನಾಡಿದ ಅವರು, ಆರ್ಎಸ್ಎಸ್ ಸ್ವಯಂಸೇವಕನ ಪ್ರರಾಕ್ರಮದಿಂದಲೇ ಭಾರತದ ಹೆಮ್ಮೆಯ ಪುತ್ರ 48 ಗಂಟೆಯೊಳಗೆ ಹಿಂದಿರುಗುತ್ತಿದ್ದಾರೆ. ಇದು ಆರ್ಎಸ್ಎಸ್ಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಈ ಮೂಲಕ ಆರ್ಎಸ್ಎಸ್ ಹಾಗೂ ಪ್ರಧಾನಿ ಮೋದಿಯ ಗುಣಗಾನ ಮಾಡಿದ್ದಾರೆ.
ಬಿಜೆಪಿ ನಾಯಕ ಸುಧಂಶು ಮಿತ್ತಲ್ರ 'ಆರ್ಎಸ್ಎಸ್: ಬಿಲ್ಡಿಂಗ್ ಇಂಡಿಯಾ ಥ್ರೂ ಸೇವಾ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಏರ್ಸ್ಟ್ರೈಕ್ ಕುರಿತಾಗಿ ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿರುವ ಬಗ್ಗೆ ಕಿಡಿ ಕಾರಿದರು.