ಕರ್ನಾಟಕ

karnataka

ETV Bharat / bharat

ರಾಷ್ಟ್ರ ರಕ್ಷಣೆಗಿಂತ ದೊಡ್ಡ ಪುಣ್ಯವಿಲ್ಲ: ಸಂಸ್ಕೃತದಲ್ಲಿ ಟ್ವೀಟ್​ ಮಾಡಿ ರಫೇಲ್​​ ಸ್ವಾಗತಿಸಿದ ಮೋದಿ - ರಫೇಲ್​

ಫ್ರಾನ್ಸ್​ನಿಂದ ಹೊರಟು ಬರೋಬ್ಬರಿ 7 ಸಾವಿರ ಕಿ.ಮೀ ಕ್ರಮಿಸಿದ ಮೊದಲ ಹಂತದ 5 ರಫೇಲ್​ ಯುದ್ಧ ವಿಮಾನಗಳು ಇದೀಗ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿವೆ. ಪ್ರಧಾನಿ ನರೇಂದ್ರ ಮೋದಿ ಈ ಯುದ್ಧ ವಿಮಾನಗಳನ್ನು ಸಂಸ್ಕೃತದಲ್ಲಿ ಟ್ವೀಟ್‌ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

pm Modi tweets
pm Modi tweets

By

Published : Jul 29, 2020, 5:08 PM IST

ನವದೆಹಲಿ:ಫ್ರಾನ್ಸ್​​ನಿಂದ ಭಾರತಕ್ಕೆ ಅತ್ಯಾಧುನಿಕ ರಫೇಲ್​ ಯುದ್ಧ ವಿಮಾನ ಆಗಮನವಾಗಿದೆ. ಸದ್ಯ ಹರಿಯಾಣದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಈ ಫೈಟರ್‌ ಜೆಟ್‌ಗಳಿವೆ. ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತದಲ್ಲಿ ಟ್ವೀಟ್​ ಮಾಡಿ ವೆಲ್​ಕಮ್​ ಮಾಡಿದ್ದಾರೆ.

ರಾಷ್ಟ್ರ ರಕ್ಷಣೆ ಮಾಡುವುದಕ್ಕಿಂತಲೂ ದೊಡ್ಡ ಪುಣ್ಯದ ಕೆಲಸವಿಲ್ಲ, ರಾಷ್ಟ್ರ ರಕ್ಷಣೆಯೇ ವ್ರತ, ರಾಷ್ಟ್ರ ರಕ್ಷಣೆಯೇ ಯಜ್ಞ, ನಭಂ ಸ್ಪರ್ಶಂ ದೀಪ್ತಂ ಎಂಬ ಭಾರತೀಯ ವಾಯುಪಡೆಯ ಘೋಷ ವಾಕ್ಯದೊಂದಿಗೆ ಫೈಟರ್‌ ಜೆಟ್‌ಗಳನ್ನು ಮೋದಿ ಸ್ವಾಗತಿಸಿದ್ದಾರೆ.

ವಿಶ್ವದಲ್ಲಿಯೇ ರಫೇಲ್​​ ಅತ್ಯುತ್ತಮ ಯುದ್ಧ ವಿಮಾನವಾಗಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಭಾರತ, ಫ್ರಾನ್ಸ್​​ನೊಂದಿಗೆ ಈ ಒಪ್ಪಂದ ಮಾಡಿಕೊಂಡಿತ್ತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಕೂಡ ಟ್ವೀಟ್​ ಮಾಡಿದ್ದು, ಹಕ್ಕಿಗಳು ಸೇಫ್​ ಆಗಿ ದೇಶಕ್ಕೆ ಆಗಮಿಸಿ ಅಂಬಾಲದಲ್ಲಿ ಲ್ಯಾಂಡ್​ ಆಗಿವೆ. ಮಿಲಿಟರಿ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ವಾಯುಸೇನೆಯಲ್ಲಿ ಇವು ಕ್ರಾಂತಿ ಬರೆಯಲಿವೆ ಎಂದಿದ್ದಾರೆ.

ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್​ ಮಾಡಿದ್ದು, ನಿಜವಾಗ್ಲೂ ರಫೇಲ್​ಗಳು ತಾವು ಗೇಮ್​ ಚೇಂಜರ್​ ಎಂಬುದನ್ನು ಸಾಬೀತುಪಡಿಸಲಿವೆ ಎಂದಿದ್ದಾರೆ.

ABOUT THE AUTHOR

...view details