ಕರ್ನಾಟಕ

karnataka

ETV Bharat / bharat

ಬಿಹಾರ ಎಲೆಕ್ಷನ್​​​: 12 ರ‍್ಯಾಲಿಗಳಲ್ಲಿ ನಮೋ ಭಾಗಿ, ಮೈತ್ರಿ ಕೂಟದ ಪರ ಚುನಾವಣಾ ಪ್ರಚಾರ! - 12 ಪ್ರಚಾರ ಸಭೆಗಳಲ್ಲಿ ಮೋದಿ ಭಾಗಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದು, ಒಟ್ಟು 12 ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ.

PM Modi to address 12 election rallies
PM Modi to address 12 election rallies

By

Published : Oct 16, 2020, 5:44 PM IST

ಪಾಟ್ನಾ:ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಇದೇ ತಿಂಗಳ 28ರಂದು ಮೊದಲನೇ ಹಂತದ ಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಕಣಕ್ಕಿಳಿದು ಪ್ರಚಾರ ನಡೆಸುತ್ತಿದ್ದಾರೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು, ಇದೇ ತಿಂಗಳ 23 ರಿಂದ ಒಟ್ಟು 12 ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಸಸಾರಾಮ್​, ಗಯಾ, ಬಾಗಲ್ಪೂರ್​, ಮುಜಾಫುರ್​ಪುರ್​​, ಪಾಟ್ನಾಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಹಾರ ಬಿಜೆಪಿ ಚುನಾವಣಾ ಪ್ರಚಾರದ ವಕ್ತಾರ ದೇವೇಂದ್ರ ಫಡ್ನವಿಸ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ ಸರ್ಕಾರ ಬರುವುದು ಎಲ್​​ಜೆಪಿಗೆ ಇಷ್ಟವಿಲ್ಲ: ಸುಶೀಲ್​ ಮೋದಿ!

ಯಾವ ದಿನಾಂಕದಂದು ನಮೋ ಪ್ರಚಾರ?

ಅಕ್ಟೋಬರ್​ 23, ಅಕ್ಟೋಬರ್​​​ 28,ನವೆಂಬರ್​ 1 ಹಾಗೂ ನವೆಂಬರ್​ 3ರಂದು ನಮೋ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಕೊನೆಯ ದಿನ ಚಂಪಾರಣ್ಯದಲ್ಲಿ ನಮೋ ಚುನಾವಣಾ ಭಾಷಣ ಮಾಡಲಿದ್ದಾರೆ. ಬಿಹಾರ ಚುನಾವಣೆಗಾಗಿ ಈಗಾಗಲೇ ಬಿಜೆಪಿ - ಜೆಡಿಯು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದು, ನಿತೀಶ್​ ಕುಮಾರ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

ಬಿಹಾರದ 243 ಕ್ಷೇತ್ರಗಳ ಚುನಾವಣೆ ಅಕ್ಟೋಬರ್​ 28, ನವೆಂಬರ್​ 3ಮತ್ತು 7ರಂದು ಮೂರು ಹಂತಗಳಲ್ಲಿ ನಡೆಯಲಿದೆ. ಇದಕ್ಕಾಗಿ ಬಿಜೆಪಿ - ಜೆಡಿಯು ಮೈತ್ರಿ ಮಾಡಿಕೊಂಡಿದ್ದರೆ, ಕಾಂಗ್ರೆಸ್​-ಆರ್​ಜೆಡಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ.

ABOUT THE AUTHOR

...view details