ಕರ್ನಾಟಕ

karnataka

By

Published : Sep 21, 2020, 1:50 PM IST

Updated : Sep 21, 2020, 2:34 PM IST

ETV Bharat / bharat

ಅಂಗೀಕಾರಗೊಂಡ ಕೃಷಿ ಮಸೂದೆಗಳು ಎಪಿಎಂಸಿಗೆ ವಿರುದ್ಧವಲ್ಲ: ಪ್ರಧಾನಿ ಮೋದಿ

ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಕೃಷಿ ಮಸೂದೆಗಳು ರೈತರ ಪರವಾಗಿವೆ ಎಂದು ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.

pm modi
ಪ್ರಧಾನಿ ಮೋದಿ

ನವದೆಹಲಿ:ರಾಜ್ಯಸಭೆಯಲ್ಲಿ ಭಾನುವಾರ ಎರಡು ಕೃಷಿ ಮಸೂದೆಗಳು ಅಂಗೀಕಾರಗೊಂಡಿದ್ದು, ಈ ಮಸೂದೆಗಳು ಕೃಷಿ ವಲಯದಲ್ಲಿ ಸದ್ಯಕ್ಕೆ ಅನಿವಾರ್ಯವಾಗಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಲ್ಲಿ ಆರಂಭವಾಗಲಿರುವ 9 ಹೆದ್ದಾರಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ, ಕೃಷಿ ಮಸೂದೆಗಳ ಬಗ್ಗೆಯೂ ಮಾತನಾಡಿದರು.

ಕೃಷಿ ಮಸೂದೆಗಳು ಅಂಗೀಕಾರಗೊಂಡ ಕಾರಣದಿಂದ ನನ್ನ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮಸೂದೆಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಈ ಮಸೂದೆಗಳು ಕೃಷಿ ಮಂಡಿಗಳಿಗೆ ವಿರುದ್ಧವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.

ಇದರ ಜೊತೆಗೆ ಮೊದಲಿನಂತೆ ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರೆಸಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೋದಿ ಹೇಳಿದ್ದಾರೆ.

Last Updated : Sep 21, 2020, 2:34 PM IST

ABOUT THE AUTHOR

...view details