ನವದೆಹಲಿ:ಆಗಸ್ಟ್ 12ರಂದು ಪ್ರಸಾರವಾದ ಪ್ರಧಾನಿ ಮೋದಿ ಭಾಗವಹಿಸಿದ್ದ ಖ್ಯಾತ ಇಂಗ್ಲಿಷ್ ಟಿವಿ ಶೋ 'ಮ್ಯಾನ್ ವರ್ಸಸ್ ವೈಲ್ಡ್' ಭಾರಿ ಸುದ್ದಿ ಮಾಡಿತ್ತು.
ಉತ್ತರಾಖಂಡ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಚಿತ್ರೀಕರಣವಾಗಿದ್ದ ಈ ಶೋನಲ್ಲಿ ಮೋದಿ ಬಹುತೇಕ ಹಿಂದಿಯಲ್ಲೇ ಶೋದ ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸಂಭಾಷಣೆ ನಡೆಸಿದ್ದರು.
ಮೋದಿ ಹಾಗೂ ಬೇರ್ ಗ್ರಿಲ್ಸ್ ಈ ಸಂಭಾಷಣೆ ನೋಡುಗರಿಗೆ ಅಚ್ಚರಿ ಜೊತೆಗೆ ಕುತೂಹಲವೂ ಮೂಡಿಸಿತ್ತು. ಬ್ರಿಟನ್ ಮೂಲದ ಬೇರ್ ಗ್ರಿಲ್ಸ್ಗೆ ಹಿಂದಿ ಭಾಷೆ ಅರ್ಥವಾಗುತ್ತದೆಯೇ ಎನ್ನುವ ಪ್ರಶ್ನೆಯನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಎತ್ತಿದ್ದರು. ಸದ್ಯ ಈ ಪ್ರಶ್ನೆ ಮೋದಿಗೂ ತಲುಪಿದ್ದು, ಈ ವಿಚಾರಕ್ಕೆ ತಮ್ಮ 'ಮನ್ ಕಿ ಬಾತ್'ನಲ್ಲಿ ಸ್ಪಷ್ಟನೆ ನೀಡಿದ್ದಾರೆ.