ಕರ್ನಾಟಕ

karnataka

ETV Bharat / bharat

RSS ಹಿರಿಯ ಮುಖಂಡ ಪಿ ಪರಮೇಶ್ವರನ್ ವಿಧಿವಶ: ಇವರು 'ಭಾರತಾಂಬೆಯ ಹೆಮ್ಮೆಯ ಪುತ್ರ' ಎಂದ ಮೋದಿ - ಪಿ ಪರಮೇಶ್ವರನ್​ ನಿಧನ

ಭಾರತೀಯ ಜನಸಂಘದ ಮಾಜಿ ನಾಯಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಹಿರಿಯ ಪ್ರಚಾರಕರಲ್ಲಿ ಒಬ್ಬರಾದ ಕೇರಳದ ಪಿ.ಪರಮೇಶ್ವರನ್‌ ಇಂದು ನಿಧನರಾಗಿದ್ದಾರೆ.

RSS ideologue Parameswaran passes away
ಪಿ ಪರಮೇಶ್ವರನ್​ ನಿಧನ

By

Published : Feb 9, 2020, 1:37 PM IST

ಕೊಚ್ಚಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಹಿರಿಯ ಪ್ರಚಾರಕರಲ್ಲಿ ಒಬ್ಬರಾದ ಕೇರಳದ ಪಿ.ಪರಮೇಶ್ವರನ್ ಇಂದು ನಿಧನರಾಗಿದ್ದಾರೆ.

ಭಾರತೀಯ ಜನಸಂಘದ ಮಾಜಿ ನಾಯಕರೂ ಆಗಿದ್ದ ಪರಮೇಶ್ವರನ್ ವಯೋಸಹಜ ಕಾಯಿಲೆಗೆ ಪಾಲಕ್ಕಾಡ್​ನ ಒಟ್ಟಪಾಲಂನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ನಸುಕಿನ ಜಾವ 12.10 ಗಂಟೆ ಸುಮಾರಿಗೆ ಅಸು ನೀಗಿದ್ದಾರೆ.

ಆರ್​ಎಸ್​ಎಸ್​ ನಾಯಕನ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, ಪರಮೇಶ್ವರನ್ ಭಾರತ ಮಾತೆಯ ಹೆಮ್ಮೆಯ ಪುತ್ರ. ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಕುರಿತು ಜಾಗೃತಿ ಮೂಡಿಸುವಲ್ಲಿ, ಬಡವರ ಸೇವೆ ಮಾಡುವಲ್ಲಿ ತಮ್ಮ ಜೀವನ ಮುಡಿಪಿಟ್ಟಿದ್ದರು. ಇವರ ಆಲೋಚನೆ ಹಾಗೂ ಬರಹ ಅಸಾಧಾರಣವಾಗಿದ್ದವು. ಇವರೊಂದಿಗೆ ಹಲವು ಬಾರಿ ಮಾತನಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಅವರು ಅತ್ಯುನ್ನತ ಬುದ್ಧಿಜೀವಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

1927ರಲ್ಲಿ ಜನಿಸಿದ್ದ ಪರಮೇಶ್ವರನ್, 1951 ರಿಂದ ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಗವದ್ಗೀತೆ ಹಾಗೂ ರಾಮಾಯಣದ ಸಾರ ​ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ವಿಚಾರ ಕೇಂದ್ರ, ದೀನ್​ದಯಾಳ್ ಉಪಾಧ್ಯಾಯ​ ಇನ್​ಸ್ಟಿಟ್ಯೂಟ್​ನ ನಿರ್ದೇಶಕರಾಗಿ, ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ಅಮೃತ ಕೀರ್ತಿ ಪ್ರಶಸ್ತಿಗಳು ಒಲಿದು ಬಂದಿವೆ.

ABOUT THE AUTHOR

...view details