ಕರ್ನಾಟಕ

karnataka

ETV Bharat / bharat

ದಯವಿಟ್ಟು ಸ್ವದೇಶಕ್ಕೆ ವಾಪಸ್ ಕಳುಹಿಸಿ;  ಜಪಾನ್‌ನಲ್ಲಿ ಸಿಲುಕಿರುವ 220  ಭಾರತೀಯರ ಮನವಿ

ಸಂಶೋಧನೆ ಸೇರಿದಂತೆ ಇತರ ಕೆಲಸದ ನಿಮಿತ್ತ ಜಪಾನ್‌ಗೆ ಹೋಗಿದ್ದ 220 ಮಂದಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಕಿಯೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ತಂಗಿರುವ ಇವರೆಲ್ಲಾ ತಮ್ಮನ್ನು ಭಾರತಕ್ಕೆ ವಾಪಸ್‌ ಕಳುಹಿಸುವಂತೆ ಮನವಿ ಮಾಡಿದ್ದಾರೆ.

Indians stranded in Japan
ಜಪಾನ್‌ನಲ್ಲಿ ಸಿಲುಕಿರುವ ಭಾರತೀಯರು

By

Published : Apr 21, 2020, 8:16 PM IST

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಜಪಾನ್‌ನಲ್ಲಿ ಸಿಲುಕಿರುವ 220 ಮಂದಿ ಭಾರತೀಯರು ಸ್ವದೇಶಕ್ಕೆ ವಾಪಸ್‌ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಟೊಕಿಯೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಆಗಮಿಸಿರುವ ಇವರೆಲ್ಲ ಇಲ್ಲಿಂದ ತವರಿಗೆ ವಾಪಸ್ ಕಳುಹಿಸುವಂತೆ ಅಂಗಲಾಚುತ್ತಿದ್ದಾರೆ. ಕೋವಿಡ್‌19 ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 24 ರಂದು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದರು. ಅಂದಿನಿಂದ ಇವರು ಜಪಾನ್‌ನಲ್ಲೇ ಸಿಲುಕಿದ್ದು, ವಾಪಸ್‌ ಕರೆತರುವ ಪ್ರಕ್ರಿಯೆಗಳು ಮುಂದುವರೆದಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ತಮಗೂ ಸೋಂಕು ಹರಡುವ ಭೀತಿ ಇದೆ. ಹೀಗಾಗಿ ನಮ್ಮನ್ನು ಭಾರತಕ್ಕೆ ವಾಪಸ್‌ ಕರೆಸಿಕೊಂಡರೆ ಕ್ವಾರಂಟೈನ್‌ಗೆ ಒಳಗಾಗುತ್ತೇವೆ. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕರಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ದೂರವಾಣಿ ಮೂಲಕ ಮಾಹಿತಿ ನೀಡಿರುವ ಹೊಕಾಯಿಡೋ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರಾಹುಲ್‌ ಜೋಯಿ, ವಿವಿ ಜೊತೆ ಮಾಡಿಕೊಂಡಿದ್ದ ಒಪ್ಪಂದದೊಂದಿಗೆ ನನ್ನ ವೈದ್ಯಕೀಯ ವಿಮೆ ಅವಧಿ ಕೂಡ ಮುಕ್ತಾಯವಾಗಿದೆ. ಇದರಿಂದ ನನಗೆ ಭಯ ಕಾಡುತ್ತಿದೆ. ಅಹಮದಾಬಾದ್‌ಗೆ ವಾಪಸ್‌ ಹೋಗಲು ವಿಮಾನ ಟಿಕೆಟ್‌ ಕೂಡ ಬುಕ್‌ ಆಗಿತ್ತು. ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಯಾವಾಗ ನಾನು ನನ್ನ ಮಗುವನ್ನು ಕಣ್ತುಂಬಿಕೊಳ್ಳುತ್ತೇನೋ ಗೊತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಜಪಾನ್‌ನಲ್ಲಿ ಕೋವಿಡ್‌19 ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅಲ್ಲಿ ಏಪ್ರಿಲ್‌ 16 ರಿಂದ ಮುಂದಿನ ಆದೇಶ ಬರುವವರಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿಶ್ವಾದ್ಯಂತ 24 ಲಕ್ಷ ಮಂದಿಗೆ ಕೋವಿಡ್‌19 ಸೋಂಕು ದೃಢಪಟ್ಟಿದ್ದು, 1.70 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ABOUT THE AUTHOR

...view details