ಕರ್ನಾಟಕ

karnataka

ETV Bharat / bharat

ಪ್ಲಾಸ್ಟಿಕ್‌ ವಿರುದ್ಧ ಸಾಲ್‌ ಎಲೆಗಳ ಸಮರ... ಸ್ವಾವಲಂಬಿ ಹಳ್ಳಿ ಸಖಿಯರು!

ಪ್ಲಾಸ್ಟಿಕ್ ಈಗ ಜೀವ ಸಂಕುಲಕ್ಕೆ ಕಂಟಕ. ಒಂದೇ ಬಾರಿಗೆ ಬಳಸುವ ಪ್ಲಾಸ್ಟಿಕ್‌ಗೆ ದೇಶಾದ್ಯಂತ ನಿಷೇಧವಿದೆ. ಒಡಿಶಾದ ಸ್ವಸಹಾಯ ಮಹಿಳಾ ಗುಂಪೊಂದು ಇದನ್ನೇ ವರದಾನವಾಗಿಸಿಕೊಂಡಿದೆ. ಪ್ಲಾಸ್ಟಿಕ್‌ಗೆ ಮುಕ್ತಿ ಹಾಡ್ತಿದೆ.

Plastic ban, Plastic ban a boon, Plastic ban a boon to rural women, Odisha rural women plastic ban, Odisha rural women plastic ban news, ಪ್ಲಾಸ್ಟಿಕ್​ ನಿಷೇಧ, ಒಡಿಶಾ ಗ್ರಾಮೀಣ ಮಹಿಳೆಯರಿಂದ ಪ್ಲಾಸ್ಟಿಕ್​ ನಿಷೇಧ, ಒಡಿಶಾದಲ್ಲಿ ಪ್ಲಾಸ್ಟಿಕ್​ ನಿಷೇಧ, ಪ್ಲಾಸ್ಟಿಕ್​ ವಿರುದ್ಧ ಸಾಲ್​ ಎಲೆಗಳ ಸಮರ,
ಪ್ಲಾಸ್ಟಿಕ್‌ ವಿರುದ್ಧ ಸಾಲ್‌ ಎಲೆಗಳ ಸಮರ

By

Published : Dec 13, 2019, 8:02 AM IST

ಜಗತ್ತಿಗೇ ದೊಡ್ಡ ಶತ್ರು ಪ್ಲಾಸ್ಟಿಕ್‌. ಇದರ ವಿರುದ್ಧ ಎಲ್ಲೆಡೆ ಜಾಗೃತಿ ನಡೀತಿದೆ. ಆದರೆ, ಈ ಹಳ್ಳಿ ಮಹಿಳೆಯರು ಸದ್ದಿಲ್ಲದೇ ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿದ್ದಾರೆ. ಕಾಡಿನಲ್ಲಿ ಸಿಗುವ ಸಾಲ್‌ ಎಲೆಗಳನ್ನೇ ಬಳಸಿ ಊಟ ತಟ್ಟೆಗಳನ್ನ ತಯಾರಿಸ್ತಿದ್ದಾರೆ. ಒಡಿಶಾದ ಸಂಬಲ್‌ಪುರ ಜಿಲ್ಲಾಡಳಿತ ಇದೇ ಮಹಿಳಾ ಸ್ವಸಹಾಯ ಸಂಘಕ್ಕೆ ಉತ್ತೇಜನ ನೀಡುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ಮತ್ತು ಸಮಾಜದಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳುವಲ್ಲಿ ಇದು ನೆರವಾಗುತ್ತಿದೆ.

ಜಿಲ್ಲಾಡಳಿತ ಮಹಿಳೆಯರಿಗೆ ಅಗತ್ಯ ತರಬೇತಿ ನೀಡುತ್ತಿದೆ. ಸಾಂಪ್ರದಾಯಿಕ ವಿಧಾನದ ಬದಲು ಸುಧಾರಿತ ರೀತಿ ತಟ್ಟೆ ತಯಾರಿಕೆಗೆ ಯಂತ್ರೋಪಕರಣಗಳನ್ನು ಕೂಡ ಒದಗಿಸುತ್ತಿದೆ. ಈ ಪ್ರಯತ್ನದಿಂದಾಗಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸ್ತಿರೋದಲ್ಲದೇ ಇಲ್ಲಿನ ಮಹಿಳೆಯರನ್ನು ಸ್ವತಂತ್ರ ಮತ್ತು ಆರ್ಥಿಕ ಸ್ವಾವಲಂಬಿಗಳನ್ನಾಗಿಸುತ್ತಿದೆ.

ಪ್ಲಾಸ್ಟಿಕ್‌ ವಿರುದ್ಧ ಸಾಲ್‌ ಎಲೆಗಳ ಸಮರ

ಈ ಪ್ರದೇಶದಲ್ಲಿನ ದಟ್ಟ ಕಾಡಿನಲ್ಲಿ ಹೇರಳವಾಗಿ ಲಭ್ಯವಿರುವ ಸಾಲ್ ಎಲೆಗಳನ್ನು ಈ ಮಹಿಳೆಯರಿಗೆ ಉಚಿತವಾಗಿ ಪೂರೈಸಲಾಗುತ್ತಿದೆ. ಎಲೆಗಳನ್ನು ಬಳಸಿ ವೃತ್ತಾಕಾರಕ್ಕೆ ತಂದ ಎಲೆಯ ತಟ್ಟೆಗಳನ್ನ ಬಿಸಿಲಿನಲ್ಲಿ ಒಣಗಿಸಲಾಗುತ್ತೆ. ಅನಂತರ ಹೊಲಿಗೆ ಯಂತ್ರಗಳಲ್ಲಿ ಒಂದೊಂದನ್ನೇ ಹೊಲಿಯಲಾಗುತ್ತದೆ. ಹೊಲಿದ ಎಲೆಯ ತಟ್ಟೆಗಳನ್ನು ಒತ್ತುವ ಯಂತ್ರದಲ್ಲಿ ಹಾಕಿ ಅದಕ್ಕೆ ತಟ್ಟೆ ಆಕಾರವನ್ನು ನೀಡಲಾಗುತ್ತದೆ. ಸಾಂಪ್ರದಾಯಿಕ ತಟ್ಟೆಗಳು ಮತ್ತು ಬಟ್ಟಲುಗಳಿಗೆ ಹೊಲಿಸಿದರೆ ಈ ತಟ್ಟೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರುಕಟ್ಟೆ ಬೆಲೆ, ಬೇಡಿಕೆ ಇದೆ.

ಅರಣ್ಯ ಇಲಾಖೆಯೂ ಸಹ 10 ಹೊಲಿಗೆ ಮತ್ತು 4 ಒತ್ತುವ ಯಂತ್ರಗಳನ್ನ ಒದಗಿಸಿದೆ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಶಾಶ್ವತ ತರಬೇತಿ ಕೇಂದ್ರವನ್ನೂ ಸ್ಥಾಪಿಸಲು ಎಲ್ಲಾ ಅಗತ್ಯ ವ್ಯವಸ್ಥೆಯನ್ನ ಜಿಲ್ಲಾಡಳಿತವೇ ಮಾಡುತ್ತಿದೆ. ಪ್ಲಾಸ್ಟಿಕ್‌ನಿಂದ ಮುಕ್ತಿ ಹೊಂದುವ ಜತೆಗೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜಿಸುವ ಈ ಕಾರ್ಯ ನಿಜಕ್ಕೂ ಮೆಚ್ಚಲೇಬೇಕು.

ABOUT THE AUTHOR

...view details