ಕರ್ನಾಟಕ

karnataka

ಆನ್‌ಲೈನ್ ತರಗತಿಗಳಿಗೆ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಆನ್‌ಲೈನ್ ತರಗತಿಗಳಿಂದಾಗಿ ಅಶ್ಲೀಲ ತಾಣಗಳಂತಹ ಹಲವಾರು ನಿಷೇಧಿತ ಪಾಪ್-ಅಪ್‌ಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವ ಸಾಧ್ಯತೆ ಇದ್ದು, ಇದರಿಂದ ಬೆಳೆಯುವ ಮಕ್ಕಳು ದಾರಿ ತಪ್ಪುವಂತಾಗಬಹುದು ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಹೇಳಲಾಗಿದೆ..

By

Published : Jun 26, 2020, 4:55 PM IST

Published : Jun 26, 2020, 4:55 PM IST

high court
high court

ತಮಿಳುನಾಡು :ಆನ್‌ಲೈನ್‌ ತರಗತಿಗಳಿಗೆ ಮಾರ್ಗಸೂಚಿಗಳನ್ನು ರೂಪಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೈಕೋರ್ಟ್ ಆಲಿಸಿದೆ. ಆನ್‌ಲೈನ್ ತರಗತಿಗಳಿಂದಾಗಿ ಅಶ್ಲೀಲ ತಾಣಗಳಂತಹ ಹಲವಾರು ನಿಷೇಧಿತ ಪಾಪ್-ಅಪ್‌ಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವ ಸಾಧ್ಯತೆ ಇದೆ. ಇದರಿಂದ ಬೆಳೆಯುವ ಮಕ್ಕಳು ದಾರಿ ತಪ್ಪುವಂತಾಗಬಹುದು ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಹೇಳಲಾಗಿದೆ.

ಮಕ್ಕಳ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ರೂಪಿಸಲು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೆಚ್ಚಿನ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿದೆ ಎಂದು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಕ್ರಮಗಳ ಕುರಿತು ನ್ಯಾಯಾಲಯಕ್ಕೆ ವರದಿ ಮಾಡಲು ಕೇಂದ್ರ ಸರ್ಕಾರವು ಇನ್ನೂ ಸ್ವಲ್ಪ ಸಮಯ ಕೋರಿದೆ.

ಹಿರಿಯ ವಕೀಲರಾದ ಶ್ರೀ ಎಸ್.ಪ್ರಭಾಕರನ್ ಅವರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮಕ್ಕಳ ಜೀವನವು ಅಪಾಯಕ್ಕೆ ಸಿಲುಕುತ್ತದೆ ಎಂದು ಹೇಳಿದರು. ಜುಲೈ 6ರಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಅನುಸಾರ ಯಾವ ಕ್ರಮಕೈಗೊಂಡಿದ್ದಾರೆ ಎಂಬ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ.

ABOUT THE AUTHOR

...view details