ಹರಿಯಾಣ : ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಕುಸ್ತಿಪಟು ಬಬಿತಾ ಫೋಗಾಟ್ ಮತ್ತು ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಕವಿತಾ ದಲಾಲ್ ಅವರನ್ನು ಹರಿಯಾಣ ಸರ್ಕಾರ ಕ್ರೀಡಾ ವಿಭಾಗದ ಉಪ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕುಸ್ತಿಪಟು ಬಬಿತಾ ಫೋಗಾಟ್- ಕವಿತಾ ದಲಾಲ್ ಗೆ ಹರಿಯಾಣ ಸರ್ಕಾರದಿಂದ ಭರ್ಜರಿ ಗಿಫ್ಟ್ - Deputy Director of Sports and Youth Affairs Department
ಇಬ್ಬರು ಕ್ರೀಡಾಪಟುಗಳನ್ನ ಹರಿಯಾಣ ಸರ್ಕಾರ ಕ್ರೀಡಾ ವಿಭಾಗದಲ್ಲಿ ಉಪ ನಿರ್ದೇಶಕರಾಗಿ ನೇಮಕ ಮಾಡಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಬಿತಾ ಫೋಗಾಟ್ ಚಿನ್ನದ ಪದಕ ಗೆದ್ದಿರುವ ಹೆಗ್ಗಳಿಕೆ ಹೊಂದಿದ್ದಾರೆ.

ಇಬ್ಬರು ಕ್ರೀಡಾ ವಿಭಾಗದಲ್ಲಿ ಉಪ ನಿರ್ದೇಶಕರಾಗಿ ನೇಮಕ ಮಾಡಿರುವ ಬಗ್ಗೆ ಹರಿಯಾಣ ಸರ್ಕಾರ ಪತ್ರದ ಮೂಲಕ ಮಾಹಿತಿ ನೀಡಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಬಿತಾ ಫೋಗಾಟ್ ಚಿನ್ನದ ಪದಕ ಗೆದ್ದಿದ್ದಾರೆ. 2010 ಮತ್ತು 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಬಿತಾ ಫೋಗಾಟ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. 2012 ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬಬಿತಾ ಕಂಚಿನ ಪದಕ ಗೆದ್ದಿದ್ದಾರೆ. ಬಬಿತಾ ಫೋಗಾಟ್ ಕಳೆದ ವರ್ಷವಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು.
ಇನ್ನು ಕವಿತಾ ಅವರು ಭಾರತೀಯ ವೃತ್ತಿಪರ ಕುಸ್ತಿಪಟು ಆಗಿದ್ದಾರೆ. ಡಬ್ಲ್ಯುಡಬ್ಲ್ಯುಇಗೆ ಹೋದ ಮೊದಲ ಭಾರತೀಯ ಕುಸ್ತಿಪಟು ಇವರು. ಹರಿಯಾಣದ ಜಿಂದ್ ಜಿಲ್ಲೆಯ ಕುಸ್ತಿಪಟು ಕವಿತಾ ದಲಾಲ್ ದಿ ಗ್ರೇಟ್ ಖಲಿಯ ಶಿಷ್ಯಯಾಗಿದ್ದಾರೆ.