ನವದೆಹಲಿ:ಅಯೋಧ್ಯೆಯ ರಾಮಜನ್ಮಭೂಮಿ – ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ತೀರ್ಪು ಈಗಾಗಲೇ ಸುಪ್ರೀಂಕೋರ್ಟ್ನಿಂದ ಹೊರಬಿದ್ದಿದ್ದು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗ್ರಿನ್ ಸಿಗ್ನಲ್ ನೀಡಲಾಗಿದೆ. ಇದೀಗ ಇದೇ ವಿಷಯವನ್ನಿಟ್ಟುಕೊಂಡು ಇಸ್ಲಾಮಿಕ್ ಸಂಘಟನೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದೆ.
ಅಯೋಧ್ಯೆ ಭೂ ವಿವಾದ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಇಸ್ಲಾಮಿಕ್ ಸಂಘಟನೆ!
ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ನಿಂದ 'ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದರ ಬೆನ್ನಲ್ಲೇ ಇದೀಗ ಇಸ್ಲಾಮಿಕ್ ಸಂಘಟನೆವೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಇದೀಗ ಅಯೋಧ್ಯೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಮಾಡಿದ್ದು, ಸುಪ್ರೀಂಕೋರ್ಟ್ನಿಂದ ಹೊರಬಿದ್ದಿರುವ ತೀರ್ಪು ತಮ್ಮ ಹಕ್ಕಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ.
ಅಯೋಧ್ಯೆ ಭೂ ವಿವಾದ ಕೇಸ್ನಲ್ಲಿ ಇದು ಮುಖ್ಯ ಕಕ್ಷಿದಾರನಾಗಿಲ್ಲ. ಆದರೆ, ಇದೀಗ ಈ ಕೇಸ್ಗೆ ಸಂಬಂಧಪಟ್ಟಂತೆ ನೀಡಿರುವ ತೀರ್ಪಿಗೆ ತಡೆ ತಂದು ಮುಕ್ತ ಕೋರ್ಟ್ನಲ್ಲಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದೆ. ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂಕೋರ್ಟ್ನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಮಹತ್ವದ ಆದೇಶ ಹೊರಹಾಕಿತ್ತು.