ನವದೆಹಲಿ : ಸತತ 20 ದಿನಗಳಿಂದ ಒಂದೇ ಸಮನೇ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇದು ನಿಲ್ಲುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಮಾರ್ಚ್ - ಏಪ್ರಿಲ್ನಲ್ಲಿ ಕಚ್ಚಾತೈಲ ಬೆಲೆ ಪಾತಾಳಕ್ಕಿಳಿದರೂ ದರ ಇಳಿಸುವ ಕ್ರಮಕ್ಕೆ ಮುಂದಾಗದ ತೈಲ ಕಂಪನಿಗಳು ಈಗ ಮಾತ್ರ ಗ್ರಾಹಕರ ಜೀವ ಹಿಂಡುತ್ತಿವೆ. ಅತ್ತ ಕೇಂದ್ರ ಸರ್ಕಾರ ಜನಪರ ಕಾಳಜಿ ಮರೆತು ಬಡ ವಾಹನ ಸವಾರರ ಮೇಲೆ ಸವಾರಿ ಮಾಡುತ್ತಿದೆ. ಇದು ಹೀಗೆ ಮುಂದುವರೆದರೆ ಹೇಗೆ ಎಂಬ ತಣ್ಣನೇ ಆಕ್ರೋಶ ದೇಶಾದ್ಯಂತ ನಿಧಾನವಾಗಿ ಏರಿಕೆ ಆಗುತ್ತಿದೆ.