ನವದೆಹಲಿ: ಗ್ರಾಹಕರ ಜೇಬು ದಿನ ದಿನವೂ ಬಿಸಿಯಾಗುತ್ತಲೇ ಇದೆ. ತೆರಿಗೆ ಭಾರ ಹಾಗೂ ನಿರಂತರವಾಗಿ ಏರುತ್ತಿರುವ ಕಚ್ಚಾತೈಲದ ಬೆಲೆ ಏರಿಕೆ ಪರಿಣಾಮ ಸತತ 11 ದಿನಗಳಿಂದ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ದಿನದಿಂದ ದಿನಕ್ಕೆ ಏರುತ್ತಲೇ ಇದೆ ತೈಲಬೆಲೆ... ಗ್ರಾಹಕರ ಜೇಬಿಗೆ ಕತ್ತರಿ - ತೈಲಬೆಲೆ ಏರಿಕೆ
ಇವತ್ತು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 55 ಪೈಸೆ ಏರಿಕೆ ಕಾಣುವ ಮೂಲಕ 77.28 ರೂ ಗೆ ಹೆಚ್ಚಳ ಕಂಡಿದೆ. ಇನ್ನು ಡೀಸೆಲ್ ಬೆಲೆಯಲ್ಲೂ 69 ಪೈಸೆ ಏರಿಕೆ ಕಂಡು, 75.79 ಕ್ಕೆ ತಲುಪಿದೆ. ಈ ಹಿನ್ನೆಲೆ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನದಿಂದ ದಿನಕ್ಕೇ ಏರುತ್ತಲೇ ಇದೆ ತೈಲಬೆಲೆ
ಇದುವರೆಗೂ ಎಲ್ಲ ಸೇರಿ ಲೀಟರ್ಗೆ ಸರಾಸರಿ 6 ರೂ ಹೆಚ್ಚಳವಾಗಿದೆ. ಇವತ್ತು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 55 ಪೈಸೆ ಏರಿಕೆ ಕಾಣುವ ಮೂಲಕ 77.28 ರೂ ಗೆ ಹೆಚ್ಚಳ ಕಂಡಿದೆ. ಇನ್ನು ಡೀಸೆಲ್ ಬೆಲೆಯಲ್ಲೂ 69 ಪೈಸೆ ಏರಿಕೆ ಕಂಡು, 75.79 ಕ್ಕೆ ತಲುಪಿದೆ.
ನಗರ ಪೆಟ್ರೋಲ್ ಡೀಸೆಲ್
- ದೆಹಲಿ 77.28 75.79
- ಬೆಂಗಳೂರು 79.66 71.49
- ಕೋಲ್ಕತ್ತಾ 78.55 70.84
- ಮುಂಬೈ 83.62 73.75
- ಚೆನ್ನೈ 80.37 73.17