ಪುಣೆ:ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಹೀಗಾಗಿ, ಆಯ್ದ ನಗರಗಳಲ್ಲಿ ಜುಲೈ 13 ರಿಂದ 23ರ ತನಕ ಸಂಪೂರ್ಣ ಲಾಕ್ಡೌನ್ ಹೇರುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಜು.13ರಿಂದ 23ರ ತನಕ ಲಾಕ್ಡೌನ್: ಮತ್ತೆ ಮದ್ಯ ಖರೀದಿಗೆ ಮುಗಿಬಿದ್ದ ಪಾನಪ್ರಿಯರು!
ಜುಲೈ 13ರಿಂದ ಜಾರಿಯಾಗುವ ಸಂಪೂರ್ಣ ಲಾಕ್ಡೌನ್ಗೂ ಮುನ್ನ ಮದ್ಯಪ್ರಿಯರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಪುಣೆಯಲ್ಲಿ ಕಂಡು ಬಂದಿದೆ.
ಮದ್ಯದ ಅಂಗಡಿ
ಜುಲೈ 13 ರಿಂದ ಜಾರಿಯಾಗುವ ಸಂಪೂರ್ಣ ಲಾಕ್ಡೌನ್ಗೂ ಮುನ್ನ ಮದ್ಯಪ್ರಿಯರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಪುಣೆಯಲ್ಲಿ ಕಂಡು ಬಂದಿದೆ.
ಮಾರ್ಚ್ ಕೊನೆಯ ವಾರದಿಂದ ಲಾಕ್ಡೌನ್ ಹೇರಿದ ಬಳಿಕ ಸುಮಾರು 43 ದಿನ ಮದ್ಯದಂಗಡಿಗಳು ಬಂದ್ ಆಗಿದ್ದವು. ಆ ವೇಳೆ ಅಜ್ಞಾತವಾಸ ಅನುಭವಿಸಿದ್ದ ಪಾನಪ್ರಿಯರು, ಮತ್ತೆ ಲಾಕ್ಡೌನ್ ಆದೇಶ ಕೇಳಿ ಇದೀಗ ಏಕಾಏಕಿ ಮದ್ಯದಂಗಡಿಗಳ ಮೇಲೆ ಮುಗಿ ಬಿದ್ದಿದ್ದಾರೆ.