ಕರ್ನಾಟಕ

karnataka

ETV Bharat / bharat

'ನಮ್ಮ ದೇಶ, ನಮ್ಮ ಭೂಮಿ, ತೊಲಗು ಚೀನಾ': ರಾಯಭಾರ ಕಚೇರಿ ಎದುರು ಪ್ರತಿಭಟನೆ - ಸೈನಿಕರ ಹುತಾತ್ಮ

ಡ್ರ್ಯಾಗನ್‌ ದೇಶದ ವಿರುದ್ಧ ಈಶಾನ್ಯ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ತೀನ್‌ ಮೂರ್ತಿ ಮಾರ್ಗ್‌ ಸಮೀಪದಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ಸೇರಿದ ಅವರು ಶಾಂತಿಯುತ ಪ್ರತಿಭಟನೆ ನಡೆಸಿದರು.

People from Northeast protest against China
ದೆಹಲಿಯಲ್ಲಿ ಚೀನಾ ವಿರುದ್ಧ ಈಶಾನ್ಯ ಭಾಗದ ಜನರ ಪ್ರತಿಭಟನೆ; ಡ್ರ್ಯಾಗನ್ ದೇಶದ ವಿರುದ್ಧ ಆಕ್ರೋಶ

By

Published : Jun 20, 2020, 12:56 PM IST

Updated : Jun 20, 2020, 2:24 PM IST

ನವದೆಹಲಿ: 20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾಗಿರುವ ಚೀನಾ ವಿರುದ್ಧ ದೇಶಾದ್ಯಂತ ಆಕ್ರೋಶ ತೀವ್ರಗೊಳ್ಳುತ್ತಿದೆ. ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ಈಶಾನ್ಯ ಭಾಗದ ಜನರು ಇಂದು ಪ್ರತಿಭಟನೆ ನಡೆಸಿದರು.

ದೆಹಲಿಯ ತೀನ್‌ ಮೂರ್ತಿ ಮಾರ್ಗ್‌ ಸಮೀಪದಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ಸೇರಿದ ಅವರು ಶಾಂತಿಯುತ ಪ್ರತಿಭಟನೆ ನಡೆಸಿ ಕ್ಸಿ ಜಿಂಗ್‌ ಪಿಂಗ್‌ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶ, ನಮ್ಮ ಭೂಮಿ, ಚೀನಾದವರೇ ತೊಲಗಿ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಪಿಎಲ್‌ಎ ಡೌನ್‌ ಡೌನ್‌ ಎಂಬ ಘೋಷಣೆಗಳನ್ನು ಕೂಗಿ ಚೀನಾ ವಸ್ತುಗಳನ್ನು ನಿಷೇಧಿಸುವಂತೆ ಒತ್ತಾಯಿಸಿದರು.

ಜೂನ್‌ 15 ರಂದು ಗಾಲ್ವಾನ್‌ ಕಣಿವೆಯಲ್ಲಿ ನಡೆದಿದ್ದ ಭಾರತ-ಚೀನಾ ಸೇನೆಗಳ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಜಗತ್ತಿನ ಹಲವು ದೇಶಗಳು ಚೀನಾ ನಡೆಯನ್ನು ತೀವ್ರವಾಗಿ ಖಂಡಿಸಿವೆ.

Last Updated : Jun 20, 2020, 2:24 PM IST

ABOUT THE AUTHOR

...view details