ಆಂಧ್ರಪ್ರದೇಶ: ಕೊರೊನಾದಿಂದ ಮೃತಪಟ್ಟಿದ್ದಾನೆಂದು ಹೆದರಿ ಸಂಬಂಧಿಕರು ವ್ಯಕ್ತಿಯ ಮೃತದೇಹವನ್ನು ಊರ ಹೊರಗೇ ಬಿಟ್ಟು ಹೋಗಿರುವ ಘಟನೆ ಚಿತ್ತೂರಿನ ರಾಮಸಮುದ್ರದಲ್ಲಿ ನಡೆದಿದೆ.
ಕೊರೊನಾ ಭಯ: ಊರ ಹೊರಗೇ ಮೃತದೇಹ ಬಿಟ್ಟ ಸಂಬಂಧಿಕರು - ಹಳ್ಳಿಯ ಕೊನೆಯಲ್ಲೇ ಮೃತದೇಹ ಬಿಟ್ಟ ಸಂಬಂಧಿಕರು
ಬೆಂಗಳೂರಿನಿಂದ ಆಂಧ್ರಕ್ಕೆ ಕಾಲ್ನಡಿಗೆಯಲ್ಲಿ ಬಂದ ಯುವಕನೊಬ್ಬ ತನ್ನ ಹಳ್ಳಿ ತಲುಪುತ್ತಿದ್ದಂತೆ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಹರಿ ಪ್ರಸಾದ್(28) ಮೃತ ವ್ಯಕ್ತಿ. ಲಾಕ್ಡೌನ್ ಹಿನ್ನೆಲೆ ಯುವಕ ಬೆಂಗಳೂರಿನಿಂದ ಆಂಧ್ರದ ತನ್ನ ಊರು ರಾಮಸಮುದ್ರಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದ. ಆದರೆ, ಅಷ್ಟು ದೂರ ಕಾಲ್ನಡಿಗೆಯಲ್ಲಿ ಬಂದ ಕಾರಣದಿಂದ ತೀರಾ ಅಶಕ್ತನಾಗಿ ಆತ ಹಳ್ಳಿಯ ಗಡಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಆದರೆ, ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಿದ ಗ್ರಾಮಸ್ಥರು ಮೃತ ದೇಹದ ಬಳಿ ಹೋಗಲು ಭಯಪಟ್ಟಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮೃತ ದೇಹವನ್ನು ಪರೀಕ್ಷಿಸಿದ್ದಾರೆ. ಆದರೆ ,ಕೊರೊನಾಗೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಆತನಲ್ಲಿ ಕಂಡುಬಂದಿಲ್ಲ ಹಾಗೂ ಕೊರೊನಾ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಸಂಬಂಧಿಕರು ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.