ತಿರುವಳ್ಳೂರು( ತಮಿಳುನಾಡು): ಜಾತಿ ತಾರತಮ್ಯ ಹಿನ್ನೆಲೆ ಸ್ವಾತಂತ್ರ್ಯ ದಿನಾಚರಣೆಯಂದು ಪಂಚಾಯತ್ ಅಧ್ಯಕ್ಷೆ ಧ್ವಜಾರೋಹಣ ಮಾಡುವುದಕ್ಕೆ ಅಡ್ಡಿಪಡಿಸಿದ ಘಟನೆ ತಿರುವಳ್ಳೂರು ಜಿಲ್ಲೆಯ ಅತ್ತುಪಕ್ಕಂ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದಿದೆ.
ಜಾತಿ ತಾರತಮ್ಯ: ಪಂಚಾಯತ್ ಅಧ್ಯಕ್ಷೆಯ ಧ್ವಜಾರೋಹಣಕ್ಕೆ ಅಡ್ಡಿಪಡಿಸಿದ ಆರೋಪ
ತಿರುವಳ್ಳೂರು ಜಿಲ್ಲೆಯ ಅತ್ತುಪಕ್ಕಂ ಪಂಚಾಯತ್ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನದಂದು ಪಂಚಾಯತ್ ಅಧ್ಯಕ್ಷೆ ಧ್ವಜಾರೋಹಣ ಮಾಡುವುದಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದೆ.
ಪಂಚಾಯತ್ ಅಧ್ಯಕ್ಷೆ ಅಮೀರ್ಥಂ, ತಿರುವಳ್ಳೂರು ಜಿಲ್ಲೆಯ ಅತ್ತುಪಕ್ಕಂ ಪಂಚಾಯತ್ ನಿವಾಸಿ. ಇಲ್ಲಿಯ ಪ್ರಬಲ ಜಾತಿಯ ಮಾಜಿ ಪಂಚಾಯತ್ ಅಧ್ಯಕ್ಷ ಹರಿದಾಸ್ ಎನ್ನುವರು ಅಮೀರ್ಥಂ ಪಂಚಾಯತ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ವಿರೋಧ ವ್ಯಕ್ತಪಡಿಸಿ, ಅವರ ಕೆಲಸಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನಲಾಗಿದೆ.
ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಅಮೀರ್ಥಂ ರಾಷ್ಟ್ರಧ್ವಜ ಹಾರಿಸುವುದನ್ನು ನಿರಾಕರಿಸಲಾಯಿತು. ನಿರಾಸೆಗೊಂಡ ಅವರು ಭಾರತ ಸಂವಿಧಾನದ 15 ನೇ ವಿಧಿ ಅನ್ವಯ ಮಾಜಿ ಪಂಚಾಯತ್ ಅಧ್ಯಕ್ಷ ಹರಿದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.