ಕರ್ನಾಟಕ

karnataka

ETV Bharat / bharat

ರಾಮ ಮಂದಿರ ಭೂಮಿ ಪೂಜೆ: ಪಾಕಿಸ್ತಾನದ ಹಿಂದೂ ನಿರಾಶ್ರಿತರಿಂದ ಸಂಭ್ರಮಾಚರಣೆ - ಆದರ್ಶ್ ನಗರ ಪ್ರದೇಶದ ಪಾಕಿಸ್ತಾನದ ಹಿಂದೂ ನಿರಾಶ್ರಿತರು

ಆದರ್ಶ್ ನಗರ ಪ್ರದೇಶದಲ್ಲಿರುವ ಪಾಕಿಸ್ತಾನದ ಹಿಂದೂ ನಿರಾಶ್ರಿತರು ಸಾವಿರಾರು ದೀಪಗಳನ್ನು ಬೆಳಗುವ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಸಂತಸ ವ್ಯಕ್ತಿಪಡಿಸಿ, ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

celebration
celebration

By

Published : Aug 6, 2020, 8:13 AM IST

ನವದೆಹಲಿ:ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ಶ್ರೀ ರಾಮನ ಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದು, ಇದರಿಂದಾಗಿ ದೇಶದಲ್ಲಿ ದೀಪಾವಳಿ ಹಬ್ಬದಂತಹ ವಾತಾವರಣ ನಿರ್ಮಾಣಗೊಂಡಿತು. ನಿನ್ನೆ ಸಂಜೆ ರಾಮ ಮಂದಿರಕ್ಕೆ ಅಡಿಪಾಯ ಹಾಕಿದ ಹಿನ್ನೆಲೆ ಜನರು ತಮ್ಮ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಏಕತೆ ತೋರಿದರು.

ದೀಪ ಬೆಳಗಿಸಿ ಸಂಭ್ರಮಾಚರಣೆ

ದೀಪ ಬೆಳಗಿಸುವ ಮೂಲಕ ದೀಪಾವಳಿ ಆಚರಿಸಿದ ನಿರಾಶ್ರಿತರು:

ಆದರ್ಶ್ ನಗರ ಪ್ರದೇಶದ ಪಾಕಿಸ್ತಾನದ ಹಿಂದೂ ನಿರಾಶ್ರಿತರಾಗಿರುವ ಸುಮಾರು 300 ಕುಟುಂಬಗಳು ಸಾವಿರಾರು ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಿ, ಇನ್ನು ಮುಂದೆ ದೇಶದಲ್ಲಿ ಎರಡು ಬಾರಿ ದೀಪಾವಳಿ ಆಚರಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಎಲ್ಲ ಹಿಂದೂಗಳು ಹೆಮ್ಮೆ ಪಡುವಂತಹ ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂದು ಅವರು ಹೇಳಿದರು.

ದೀಪ ಬೆಳಗಿಸಿ ಸಂಭ್ರಮಾಚರಣೆ
ದೀಪ ಬೆಳಗಿಸಿ ಸಂಭ್ರಮಾಚರಣೆ

ಸರ್ಕಾರದಿಂದ ಮೂಲ ಸೌಲಭ್ಯಗಳಿಗಾಗಿ ಬೇಡಿಕೆ:

ಈ ಜನರು ಸರ್ಕಾರದ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಇದೆಲ್ಲದರ ಹೊರತಾಗಿಯೂ, ಅವರು ಕೆಲವು ಮೂಲ ಸೌಲಭ್ಯಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸರ್ಕಾರ ನಮಗೆ ಪೌರತ್ವ ನೀಡಿದ್ದರೂ, ಮೂಲ ಸೌಲಭ್ಯಗಳ ಕೊರತೆಯಿದೆ. ಇದಕ್ಕಾಗಿ ನಾವು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದೇವೆ ಎಂದರು. ಇವರು 2014ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ.

ABOUT THE AUTHOR

...view details