ಇಸ್ಲಾಮಾಬಾದ್:ಪಾಕ್‌ನಲ್ಲಿರುವ ಸಿಖ್ಖರ ಪವಿತ್ರ ದರ್ಬಾರ್ ಸಾಹಿಬ್ ಗುರುದ್ವಾರದ ಕರ್ತಾರ್ಪುರ ಕಾರಿಡಾರ್ ಯೋಜನೆ ಉದ್ಘಾಟನೆ ನವೆಂಬರ್ 9ರಂದು ನಡೆಯಲಿದ್ದು, ಅದಕ್ಕಾಗಿ ಪಾಕ್ನಿಂದ ಪ್ರಧಾನಿ ನರೇಂದ್ರ ಮೋದಿ ಬದಲಿಗೆ ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಆಹ್ವಾನ ನೀಡಲು ಮುಂದಾಗಿದೆ.
ಕರ್ತಾರ್ಪುರ ಕಾರಿಡಾರ್ ಯೋಜನೆಯಲ್ಲಿ ಭಾರತದೊಂದಿಗೆ ಹೊಸ ಗೇಮ್ ಶುರು ಮಾಡಿರುವ ಪಾಕಿಸ್ತಾನ, ಇದೀಗ ಪ್ರಧಾನಿ ನರೇಂದ್ರ ಮೋದಿ ಬದಲು ಮಾಜಿ ಪ್ರಧಾನಿಗೆ ಆಹ್ವಾನ ನೀಡುತ್ತಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿಕೆ ನೀಡಿದ್ದು, ಆದಷ್ಟು ಬೇಗ ಅವರಿಗೆ ಇದಕ್ಕೆ ಸಂಬಂಧಿಸಿದಂತೆ ಆಹ್ವಾನ ಕಳುಹಿಸುವುದಾಗಿ ತಿಳಿಸಿದ್ದಾರೆ. ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಖ್ಖರು ಭೇಟಿ ನೀಡುವ ಕಾರಣ, ಮಾಜಿ ಪ್ರಧಾನಿ ಸಿಂಗ್ಗೆ ಆಹ್ವಾನ ನೀಡಿ ಇಲ್ಲೂ ಸಹ ಗೇಮ್ ಪ್ಲಾನ್ ಮಾಡಲು ಪಾಕ್ ಮುಂದಾಗಿದೆ.