ಕರಾಚಿ:ಭಾರತದಲ್ಲಿಭಯೋತ್ಪಾದಕ ಸಂಘಟನೆಗಳು ಹಾಗು ವಿಧ್ವಂಸಕ ಕೃತ್ಯಗಳಿಗೆ ಬೆಂಬಲ ನೀಡುತ್ತಾ ಬಂದಿರುವ ಪಾಕಿಸ್ತಾನ ತನ್ನ ಕೃತ್ಯದ ಬಗ್ಗೆ ಕೊನೆಗೂ ಪರೋಕ್ಷವಾಗಿ ಒಪ್ಪಿಕೊಂಡಿದ್ದು, ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಇದಕ್ಕೆ ಪುಷ್ಟಿ ನೀಡಿದೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ಧುಗೊಂಡ ಬಳಿಕ ಉಭಯ ದೇಶಗಳ ನಡುವಿನ ವೈಷಮ್ಯ ಮುಂದುವರೆದಿದೆ. ಇದೇ ವಿಷಯವಾಗಿ ಪಾಕ್ ವಿಶ್ವಸಂಸ್ಥೆಯಲ್ಲೂ ಭಾರತದ ಮೇಲೆ ಹರಿಹಾಯ್ದು ತೀವ್ರ ಮುಖಭಂಗ ಅನುಭವಿಸಿದೆ.
ಇವತ್ತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಕಳೆದೆರಡು ತಿಂಗಳಿಂದ ಜಮ್ಮುಕಾಶ್ಮೀರದಲ್ಲಿ ಅಮಾನವೀಯ ರೀತಿಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಆಜಾದ್ ಕಾಶ್ಮೀರ( ಪಾಕ್ ಆಕ್ರಮಿತ ಕಾಶ್ಮೀರ) ದಿಂದ ಯಾರೂ ಕೂಡಾ ಅಲ್ಲಿಗೆ ತೆರಳಿ ಸಹಾಯ ಮಾಡಬೇಡಿ. ಜೊತೆಗೆ ಕಾಶ್ಮೀರದ ಜನತೆಯ ಪರವಾಗಿ ಹೋರಾಡುವ ನಿಟ್ಟಿನಲ್ಲಿ ಅಲ್ಲಿಗೆ ತೆರಳಬೇಡಿ. ನೀವೂ ಮಾಡುವ ಮಾನವೀಯ ಕೆಲಸ ಭಾರತೀಯರಿಗೆ ಉಗ್ರರ ಕೃತ್ಯದ ರೀತಿ ಕಂಡುಬರುತ್ತದೆ ಎಂದು ಹೇಳಿದ್ದಾರೆ.
ಈ ಮೂಲಕ ಪಾಕ್ ಪ್ರಧಾನಿ ಭಯೋತ್ಪಾದನೆಗೆ ನೀಡುವ ಕುಮ್ಮಕ್ಕು ಇದೀಗ ಮತ್ತೆ ವಿಶ್ವದೆದುರು ಮತ್ತೆ ಬಟಾಬಯಲಾಗುತ್ತಿದೆ.