ಕರ್ನಾಟಕ

karnataka

ETV Bharat / bharat

ಮೋದಿ, ಶಾಗೆ ಹೆದರಿದ ಚೀನಾ - ಪಾಕ್​ ದೆಹಲಿಯಲ್ಲಿ ವಿಷಗಾಳಿ ಬಿಟ್ಟಿವೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್

ವಿಷಕಾರಿ ಅನಿಲವನ್ನು ನೆರೆಯ ಯಾವುದೇ ದೇಶದಿಂದ ಬಿಡುಗಡೆ ಮಾಡಲಾಗಿದೆ ಎಂಬಂತೆ ತೋರುತ್ತಿದೆ. ಪಾಕಿಸ್ತಾನ ಮತ್ತು ಚೀನಾ ಆತಂಕಕ್ಕೊಳಗಾಗಿ ಈಗ ನಮ್ಮ ಬಗ್ಗೆ ಭಯಭೀತರಾಗಿದ್ದಾರೆ. ಹೀಗಾಗಿ, ಚೀನಾ- ಪಾಕ್ ಜೊತೆಗೂಡಿ ದೆಹಲಿಯಲ್ಲಿ ವಿಷಗಾಳಿ ಬಿಟ್ಟಿವೆ ಎಂದು ಬಿಜೆಪಿ ಮುಖಂಡ ಆರೋಪ ಮಾಡಿದ್ದಾರೆ.

ವಿನೀತ್ ಅಗರ್ವಾಲ್ ಶಾರದಾ

By

Published : Nov 6, 2019, 1:22 PM IST

ಮೀರತ್​​: ದೆಹಲಿ ವಾತಾವರಣ ಕಲುಷಿತ ಆಗಲು ನೆರೆಯ ಪಾಕಿಸ್ತಾನ ಮತ್ತು ಚೀನಾ ಮುಖ್ಯ ಕಾರಣ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಆರೋಪಿಸಿದ್ದಾರೆ.

ವಿಷಕಾರಿ ಅನಿಲವನ್ನು ನೆರೆಯ ಯಾವುದೇ ದೇಶದಿಂದ ಬಿಡುಗಡೆ ಮಾಡಲಾಗಿದೆ ಎಂಬಂತೆ ತೋರುತ್ತಿದೆ. ಪಾಕಿಸ್ತಾನ ಮತ್ತು ಚೀನಾ ಆತಂಕಕ್ಕೊಳಗಾಗಿ ಈಗ ನಮ್ಮ ಬಗ್ಗೆ ಭಯಭೀತರಾಗಿದ್ದಾರೆ. ಹೀಗಾಗಿ, ಅವರೇ ಈ ಕೃತ್ಯ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ವಿನೀತ್ ಅಗರ್ವಾಲ್ ಶಾರದಾ ಹೇಳಿದ್ದಾರೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಾಕಿಸ್ತಾನವು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಿದೆ. ಪಾಕಿಸ್ತಾನ ಈಗ ನಿರಾಶೆಗೊಂಡಿದೆ. ಅವರು ಎಂದಿಗೂ ಭಾರತದ ವಿರುದ್ಧದ ಯುದ್ಧವನ್ನು ಗೆದ್ದಿಲ್ಲ ಎಂದರು.

ದೆಹಲಿಯ ಅಪಾಯಕಾರಿ ವಾಯುಮಾಲಿನ್ಯಕ್ಕೆ ಪಂಜಾಬ್ ಮತ್ತು ಹರಿಯಾಣದಲ್ಲಿ ಸುಡುವ ತ್ಯಾಜ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿ ಶಾರದಾ ವಿರುದ್ಧ ವಾಗ್ದಾಳಿ ನಡೆಸಿದರು. ದೆಹಲಿಯ ಸ್ಥಿತಿಗೆ ರೈತರು, ಕೈಗಾರಿಕೆಗಳನ್ನು ದೂಷಿಸಬಾರದು ಎಂದರು.

ABOUT THE AUTHOR

...view details