ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಚಿದಂಬರಂ ಜಾರಿ ನಿರ್ದೇಶನಾಲಯ ಕಸ್ಟಡಿ ಅವಧಿ ಅ.24ರಂದು ಮುಕ್ತಾಯವಾಗಲಿದೆ. ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಅವರನ್ನು ವಾರದ ಹಿಂದೆ ಇಡಿ ವಿಚಾರಣೆ ನಡೆಸಿ ನಂತರ ಬಂಧಿಸಿತ್ತು.
ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ದಾಖಲಿಸಿಕೊಂಡಿದ್ದ ಕೇಸ್ನಲ್ಲಿ ಸದ್ಯ ಸರ್ವೋಚ್ಛ ನ್ಯಾಯಾಲಯ ಜಾಮೀನು ನೀಡಿದೆ.
ಬೇರಾವುದೇ ಪ್ರಕರಣದಲ್ಲಿ ಬಂಧಿಯಾಗಿಲ್ಲ ಎಂದಾದರೆ ಒಂದು ಲಕ್ಷ ರೂ ವೈಯಕ್ತಿಕ ಬಾಂಡ್ ನೀಡಿ, ವಿಚಾರಣೆಗೆ ಲಭ್ಯರಿದ್ದರೆ ಚಿದಂಬರಂ ಅವರನ್ನು ಬಿಡುಗಡೆ ಮಾಡಬಹುದು ಎಂದು ಕೋರ್ಟ್ ಜಾಮೀನು ಆದೇಶದಲ್ಲಿ ಹೇಳಿದೆ. ಆದ್ರೆ ಇದೇ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಕೂಡಾ ತನಿಖೆ ನಡೆಸುತ್ತಿದ್ದು ಸದ್ಯಕ್ಕೆ 74ರ ಹರೆಯದ ಕೈ ಮುಖಂಡನಿಗೆ ಜೈಲಿನಿಂದ ಮುಕ್ತಿ ಸಿಗುವುದಿಲ್ಲ. ಇಡಿ ಅಧಿಕಾರಿಗಳು ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಿದ್ದಾರೆ.