ಗುವಾಹಟಿ /ಅಸ್ಸೋಂ: ಮಾದಕದ್ರವ್ಯ ಸಾಗಣೆಗೆ ಸಂಬಂಧಿಸಿದಂತೆ ಅಸ್ಸೋಂ ಪೊಲೀಸರು 74 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವ ಘಟನೆ ನಿನ್ನೆ ಸೋಲಾಪರದಲ್ಲಿ ನಡೆದಿದೆ.
ಡ್ರಗ್ಸ್ ಸಾಗಣೆ: ಮೂವರ ಬಂಧನ, 74 ಲಕ್ಷ ರೂ. ನಗದು ವಶ - 74 ಲಕ್ಷಕ್ಕೂ ಹೆಚ್ಚಿನ ಹಣ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್
ಡ್ರಗ್ಸ್ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸೋಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 74 ಲಕ್ಷಕ್ಕೂ ಹೆಚ್ಚಿನ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ.
ಸಂಗೀತಾ ಲೈಶನ್‌ಬಾಮ್, ಶ್ಯಾಮ್ ಲೈಥಂಗ್‌ಬಾಮ್ ಮತ್ತು ಥಂಗ್‌ಕೋಸತ್ ಬಂಧಿತ ಆರೋಪಿಗಳು. ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡುತ್ತಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನೆಲೆ ಸೋಲಾಪರದ ಕಲಾಚಿನಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಗೆ ಪೊಲೀಸರು ದಿಢೀರ್ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ 74,05,600( 74 ಲಕ್ಷ) ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾದಕ ದ್ರವ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸಂಗೀತಾ ಲೈಶನ್‌ಬಾಮ್‌ಳನ್ನು ಈ ಹಿಂದೆ ಬಸಿಸ್ತಾದಲ್ಲಿ ಸೆಕ್ಷನ್ 22ರ ಅಡಿ ಬಂಧಿಸಲಾಗಿತ್ತು. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.