ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಬೆಳಗ್ಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸುಮಾರು 400 ಸೈನಿಕರನ್ನು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಗುರಿಯಾಗಿಸಿ ದಾಳಿಗೆ ಸಂಚು ರೂಪಿಸಿತ್ತು ಎಂದು ಹಿರಿಯ ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.
ಸಿಆರ್‌ಪಿಎಫ್ ಬೆಂಗಾವಲು ಪಡೆಯ ಸುಮಾರು 20 ವಾಹನಗಳುಗುರುವಾರ ಬೆಳಗ್ಗೆ ಶ್ರೀನಗರದಿಂದ ಜಮ್ಮು ತಲುಪಬೇಕಿದ್ದವು. ಸಿಆರ್‌ಪಿಎಫ್ ಪಡೆ ವಾಹನಗಳು ಹೋಗುವ ಮಾರ್ಗ ಪುಲ್ವಾಮಾ ಬಳಿ ಭದ್ರತಾ ಪಡೆ ಸಿಬ್ಬಂದಿ ಐಇಡಿ ತುಂಬಿದ ಕಾರನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ.
2019ರ ಪುಲ್ವಾಮಾ ದಾಳಿಗೂ ಈ ಸ್ಕೆಚ್ಗೂ ಸಾಮ್ಯತೆ ಇದ್ದು, ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ಕಾರಿನಿಂದ ಯೋದರ ಮೇಲೆ ದಾಳಿ ಮಾಡಿ 400ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆ ಮಾಡುವ ಯೋಜನೆ ಹೊಂದಿದ್ದ ಎಂದು ಶಂಕಿಸಲಾಗಿದೆ.