ಪೂರ್ಬಾ ಮೆದಿನಿಪುರ:ಬಂಗಾಳಿ ಭಕ್ಷ್ಯಗಳು ಯಾರ ಬಾಯಲ್ಲಿ ನೀರೂರಿಸಲ್ಲ ಹೇಳಿ.. ಬಂಗಾಳಿ ಎಂದ ತಕ್ಷಣ ಮೊದಲಿಗೆ ನೆನಪಾಗೋದು ರುಚಿಕರ, ಬಗೆ ಬಗೆಯ ಖಾದ್ಯಗಳು. ಇಂದು ನಾವು ನಿಮಗೆ ಅಂತಹುದ್ದೇ ಒಂದು ವಿಭಿನ್ನ ಖಾದ್ಯದ ಬಗ್ಗೆ ಹೇಳ ಹೊರಟಿದ್ದೇವೆ. ಕುಂಬಳಕಾಯಿ ಬಳಸಿ ವಿವಿಧ ರೂಪಗಳಲ್ಲಿ ಈ ಖಾದ್ಯ ತಯಾರಿಸಲಾಗುತ್ತದೆ. ಶಂಕುವಿನಾಕಾರದ ಒಂದು ಒತ್ತಳದಂತಹ ಆಕೃತಿಗೆ ಕುಂಬಳಕಾಯಿಯಿಂದ ತಯಾರಿಸಿದ ಹಿಟ್ಟು ಹಾಕಿ ವಿವಿಧ ಆಕಾರಗಳನ್ನು ನೀಡಲಾಗುತ್ತದೆ. ಇದನ್ನು ಗೊಯ್ನಾ ಬೋರಿ ಎಂದು ಕರೆಯುತ್ತಾರೆ.
ಚಿಟ್ಟೆಗಳು, ಬಾತುಕೋಳಿ, ಗಿಳಿ, ನವಿಲು, ಕಿವಿಯೋಲೆ, ಬಳೆಗಳು, ಕೈಗಡಿಯಾರ ಸೇರಿದಂತೆ ಬಗೆ ಬಗೆಯ ಆಕಾರಗಳನ್ನು ನೀಡುತ್ತಾರೆ. ಈ ಡಿಸೈನರ್ ಕುಂಬಳಕಾಯಿಗಳು ದಶಕಗಳಿಂದ ಬಂಗಾಳಿ ಪಾಕದಲ್ಲಿ ಸ್ಥಾನ ಪಡೆದಿವೆ. ಪೂರ್ಬಾ ಮೆದಿನಿಪುರ ಜಿಲ್ಲೆಯ ತಮ್ಲುಕ್, ಮಹಿಷಾದಲ್, ನಂದಕುಮಾರ್ ಮತ್ತು ಮೊಯ್ನಾ ಗ್ರಾಮೀಣ ಮಹಿಳೆಯರು ಪ್ರಮುಖವಾಗಿ ಈ ಗೊಯ್ನಾ ಬೋರಿಯನ್ನು ತಯಾರಿಸುತ್ತಾರೆ.