ಹೈದರಾಬಾದ್: ಸೈಬರಾಬಾದ್ ಪೊಲೀಸರು ಮಕ್ಕಳ ಕಳ್ಳಸಾಗಣೆ ಪ್ರಕರಣಗಳನ್ನ ಭೇದಿಸಿ, ವರ್ಷದ ಅವಧಿಯಲ್ಲಿ ಸುಮಾರು 581 ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.
ಮಕ್ಕಳ ಕಳ್ಳ ಸಾಗಣೆ.. ಸೈಬರಾಬಾದ್ ಪೊಲೀಸರಿಂದ 581 ಮಕ್ಕಳ ರಕ್ಷಣೆ - undefined
ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಮಕ್ಕಳ ಕಳ್ಳಸಾಗಣೆಗೆ ತಡೆ ಹಾಕುವ ಉದ್ದೇಶದಿಂದ ಸೈಬರಾಬಾದ್ ಪೊಲೀಸರ ವಿಶೇಷ ಕಾರ್ಯಪಡೆ ವರ್ಷದ ಅವಧಿಯಲ್ಲಿ ಸುಮಾರು 581 ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.
ಕಳೆದ ವರ್ಷ ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಮಕ್ಕಳ ಕಳ್ಳಸಾಗಣೆಗೆ ತಡೆ ಹಾಕುವ ಉದ್ದೇಶದಿಂದ ಸೈಬರಾಬಾದ್ ಪೊಲೀಸರು, ಒಂದು ತಂಡವನ್ನ ರಚನೆ ಮಾಡಿತ್ತು. ಸೈಬರಾಬಾದ್ ಕಮಿಷನರೇಟ್ ಅಡಿ ಮೂರು ಜೋನ್ಗಳು ಬರುತ್ತಿದ್ದು, ಈ ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಕಳ್ಳ ಸಾಗಣೆ ತಡೆಗಟ್ಟುವ ಉದ್ದೇಶದಿಂದ ಈ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿತ್ತು.
ಹೀಗೆ 2018ರ ಜೂನ್ನಿಂದ ಇಲ್ಲಿವರೆಗೂ 581 ಮಕ್ಕಳ ರಕ್ಷಣೆ ಮಾಡಲಾಗಿದೆ. ಇನ್ನು 543 ಮಕ್ಕಳ ಪೈಕಿ, 339 ಹುಡುಗರು ಹಾಗೂ 204 ಬಾಲಕಿಯರಿದ್ದಾರೆ. ಇನ್ನು ಇವರಲ್ಲಿ 29 ಹುಡುಗರು ಹಾಗೂ 9 ಬಾಲಕಿಯರನ್ನ ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ.