ಕರ್ನಾಟಕ

karnataka

ETV Bharat / bharat

ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಸದ್ದು...! ಓರ್ವ ಉಗ್ರನ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ - ಗುಂಡಿನ ಚಕಮಕಿ

ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಎರಡರಿಂದ ಮೂರು ಉಗ್ರರು ಸೇನೆ ಜೊತೆಗೆ ಗುಂಡಿನ ಕಾಳಗ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎನ್​ಕೌಂಟರ್​

By

Published : Aug 21, 2019, 12:16 PM IST

ಶ್ರೀನಗರ:ಕಣಿವೆ ರಾಜ್ಯದಲ್ಲಿ ತಡರಾತ್ರಿ ಎನ್​ಕೌಂಟರ್​ ನಡೆದಿದ್ದು, ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ.

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಎರಡರಿಂದ ಮೂರು ಉಗ್ರರು ಸೇನೆ ಜೊತೆಗೆ ಗುಂಡಿನ ಕಾಳಗ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಎನ್​ಕೌಂಟರ್​ನಲ್ಲಿ ಓರ್ವ ಉಗ್ರನನ್ನು ಸೇನೆ ಸದೆ ಬಡಿಯುವಲ್ಲಿ ಸಫಲವಾಗಿದೆ.

ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಜಮ್ಮು - ಕಾಶ್ಮೀರದ ಪೊಲೀಸ್ ಇಲಾಖೆ ಸಹ ಕಾರ್ಯಾಚರಣೆಯಲ್ಲಿ ಸಾಥ್ ನೀಡಿತ್ತು. ಇದೇ ವೇಳೆ, ಓರ್ವ ಪೊಲೀಸ್ ಅಧಿಕಾರಿ ಪ್ರಾಣತ್ಯಾಗ ಮಾಡಿದ್ದಾರೆ.

ABOUT THE AUTHOR

...view details