ಕರ್ನಾಟಕ

karnataka

ETV Bharat / bharat

12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ... ಮುಂದುವರಿದ ವರುಣನ ಆರ್ಭಟಕ್ಕೆ ಸಾವು - ನೋವು! - ನೋವು

ಕೇವಲ 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನವಾಗಿದೆ. ಈ ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಜನ ಭಯ-ಭೀತರಾಗಿದ್ದಾರೆ.

12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ

By

Published : Jul 25, 2019, 1:26 PM IST

ಪಾಲ್ಗರ್​: ಕೇವಲ 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪವಾಗಿದೆ. ಈ ಘಟನೆಯಿಂದಾಗಿ ಒಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್​ ಜಿಲ್ಲೆಯಲ್ಲಿ ನಡೆದಿದೆ.

ಬುಧವಾರ ಮಧ್ಯರಾತ್ರಿ 1.03 ಗಂಟೆಗೆ ಭೂಕಂಪನ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್​ ಮಾಪಕದಲ್ಲಿ 3.8 ರಷ್ಟು ದಾಖಲಾಗಿದೆ ಎಂದು ಹೇಳಲಾಗಿದೆ. ಬಳಿಕ 1.15 ಗಂಟೆಯವರೆಗೆ 3.6, 2.9, 2.8 ತೀವ್ರತೆಯ ಭೂ ಕಂಪನ ಮೂರು ಬಾರಿ ಆಗಿದೆ.

12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ

ನಿನ್ನೆ ರಾತ್ರಿಯಿಂದ ಪಾಲ್ಗರ್​​​​ನಲ್ಲಿ ವರುಣ ಆರ್ಭಟ ಮುಂದುವರಿದಿದೆ. 12 ನಿಮಿಷದಲ್ಲಿ ನಾಲ್ಕು ಬಾರಿ ಭೂಕಂಪನ ಆಗಿರುವುದರಿಂದ ಕಟ್ಟಡ, ಗೋಡೆ ಕುಸಿತ ಸಂಭವಿಸಿದೆ. ಗೋಡೆ ಕುಸಿತದಿಂದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಭೂಕಂಪನ ಮತ್ತು ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಭಯ-ಭೀತರಾಗಿದ್ದಾರೆ.

ABOUT THE AUTHOR

...view details