ಕರ್ನಾಟಕ

karnataka

ETV Bharat / bharat

ಹೀಗೆ ನೋಡ್ತಾ ನೋಡ್ತಾನೆ ನಾಲ್ಕಂತಸ್ತಿನ ಕಟ್ಟಡ ಕುಸಿದು ಬಿದ್ಹೋಯ್ತು.. - Nischintapura area of Daspur block

ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕಳೆದ ಕೆಲವು ವಾರಗಳಿಂದ ಹತ್ತಿರದ ಗೊಮ್ರಾಯ್ ಕಾಲುವೆಯ ಸ್ವಚ್ಛಗೊಳಿಸುವ ಮತ್ತು ಹೂಳೆತ್ತುವ ಕಾರ್ಯಾಚರಣೆ ನಡೆಯುತ್ತಿತ್ತು. ಹೂಳೆತ್ತುವ ವೇಳೆ ಕಾಲುವೆಯಿಂದ ಮಣ್ಣನ್ನು ಹೊರತೆಗೆದಾಗ ಅದರ ಅಡಿಪಾಯ ಹಾನಿಗೊಳಗಾಗಿದೆ ಎನ್ನುತ್ತಾರೆ ಸ್ಥಳೀಯರು.

One Four-storey house collapsed in Daspur
ಪಶ್ಚಿಮ ಬಂಗಾಳ ಕಟ್ಟಡ ಕುಸಿತ: ಅವೈಜ್ಞಾನಿಕ ಸ್ವಚ್ಛಾತಾ ಪದ್ಧತಿಯೇ ಕಾರಣ

By

Published : Jun 13, 2020, 5:30 PM IST

ಪಶ್ಚಿಮ ಮಿಡ್ನಾಪೋರ್ (ಪಶ್ಚಿಮ ಬಂಗಾಳ):ಮುಂಜಾನೆ ವೇಳೆ ಜಿಲ್ಲೆಯ ದಾಸ್‌ಪುರ ಬ್ಲಾಕ್‌ನ ನಿಸ್ಚಿಂತಾಪುರ ಪ್ರದೇಶದಲ್ಲಿ ಕಾಲುವೆಯೊಂದರ ಪಕ್ಕದಲ್ಲಿ ಕಟ್ಟಲಾಗಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿರುವ ಘಟನೆ ನಡೆದಿದೆ.

ಅವೈಜ್ಞಾನಿಕ ಸ್ವಚ್ಛತಾ ಪದ್ಧತಿ.. ಕುಸಿದು ಬಿದ್ದ ಬಹುಮಹಡಿ ಕಟ್ಟಡ

ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಕಟ್ಟಡ ಅಲುಗಾಡಲಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ ಕುಸಿದಿದೆ. ಸದ್ಯ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಈ ಕಟ್ಟಡವು ಸ್ಥಳೀಯ ಉದ್ಯಮಿ ನಿಮೈ ಸಮಂತಾ ಎಂಬುವರಿಗೆ ಸೇರಿದ್ದಾಗಿತ್ತು. ಕಟ್ಟಡವು ಅಮೃತಶಿಲೆ ಅಂಗಡಿ ಮತ್ತು ನೆಲಮಹಡಿಯಲ್ಲಿ ಗೃಹೋಪಯೋಗಿ ಸಾಮಗ್ರಿಗಳ ಅಂಗಡಿ ಹೊಂದಿತ್ತು.

ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕಳೆದ ಕೆಲವು ವಾರಗಳಿಂದ ಹತ್ತಿರದ ಗೊಮ್ರಾಯ್ ಕಾಲುವೆಯ ಸ್ವಚ್ಛಗೊಳಿಸುವ ಮತ್ತು ಹೂಳೆತ್ತುವ ಕಾರ್ಯಾಚರಣೆ ನಡೆಯುತ್ತಿತ್ತು. ಹೂಳೆತ್ತುವ ವೇಳೆ ಕಾಲುವೆಯಿಂದ ಮಣ್ಣನ್ನು ಹೊರತೆಗೆದಾಗ ಅದರ ಅಡಿಪಾಯ ಹಾನಿಗೊಳಗಾಗಿದೆ ಎನ್ನುತ್ತಾರೆ ಸ್ಥಳೀಯರು. ಇನ್ನೂ ಈ ಕಾಮಗಾರಿಯಲ್ಲಿ ಹೆಚ್ಚಾಗಿ ಕೌಶಲ್ಯರಹಿತ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details