ತ್ರಿಶೂರ್: ಓಣಂ ಅನ್ನು ರಾಜ್ಯದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿ ತ್ರಿಶೂರ್ನ ವಡಕುಮ್ನಾಥ ದೇವಸ್ಥಾನದ ತೆಕ್ಕಿಂಕಡು ಮೈದಾನದಲ್ಲಿ ಪೂಕಲಂ (ಹೂವಿನ ಕಾರ್ಪೆಟ್) ಅನ್ನು ತರಹೆವಾರಿ ಹೂವುಗಳಿಂದ ಅನಾವರಣಗೊಂಡ ರಂಗೋಲಿ ಎಲ್ಲರ ಕಣ್ಮನ ಸೆಳೆಯಿತು.
1,200 ಕೆಜಿ ಹೂವುಗಳ ರಂಗೋಲಿ: ಓಣಂ ಹಬ್ಬದಲ್ಲಿ ಕಣ್ಮನ ಸೆಳೆದ ರಂಗೋಲಿ ಪ್ರದರ್ಶನ - kerala festival
ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶೂರ್ನ ವಡಕುಮ್ನಾಥ ದೇವಸ್ಥಾನದ ಎದುರು ಓಣಂ ಅಂಗವಾಗಿ ವಿವಿಧ ಹೂವುಗಳಿಂದ ಪೂಕಲಂ (ಹೂವಿನ ಕಾರ್ಪೆಟ್) ಸಾರ್ವಜನಿಕರನ್ನು ತನ್ನ ಸೆಳೆಯುತ್ತಿತ್ತು.
ಕೇರಳದ ತ್ರಿಶೂರ್ನಲ್ಲಿ ಓಣಂ ಆಚರಣೆ
ದೇವಾಲಯದ ದಕ್ಷಿಣ ದ್ವಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಈ ಪೂಕಲಂ ಅನಾವರಣದಲ್ಲಿ ತೊಡಗಿಕೊಂಡಿದ್ದರು. ಬರೋಬ್ಬರಿ 1,200 ಕೆಜಿ ಹೂವುಗಳಿಂದ, 52 ಅಡಿ ವ್ಯಾಸದಲ್ಲಿ ಆರು ಗಂಟೆಗಳ ಸಮಯ ತೆಗೆದುಕೊಂಡು ಸಿದ್ಧಪಡಿಸಲಾಯಿತು.
ಪೂಕಲಂ ಅನ್ನು ತೆಕ್ಕಿನ್ಕದ್ ಸಯಾನಾ ಸೌಹ್ರೀಧಾ ತಂಡ ತಯಾರಿಸಿದ್ದು, ಹೆಸರಾಂತ ಕಲಾವಿದ ನಂದನ್ ಪಿಳ್ಳೈ ಅವರು ವಿನ್ಯಾಸಗೊಳಿಸಿದ್ದಾರೆ. ಮುಂಜಾನೆ 3 ಗಂಟೆಗೆ ವಡಕುಮ್ಮನಾಥ ದೇವಸ್ಥಾನದ ಧಾರ್ಮಿಕ ಆಚರಣೆ ನಂತರ ಇದು ಪ್ರಾರಂಭವಾಗುತ್ತದೆ.