ಭೋಪಾಲ್: ಕೋವಿಡ್-19 ಸೋಂಕು ತಗುಲಿದ ಭೋಪಾಲ್ ಆರೋಗ್ಯ ಇಲಾಖೆಯ ನಿರ್ದೇಶಕ ಜೆ. ವಿಜಯಕುಮಾರ ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲ ಅಧಿಕಾರಿಗಳು ಹಾಗೂ ಜನರನ್ನು ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ಭೋಪಾಲ್ ಜಿಲ್ಲಾ ಕಲೆಕ್ಟರ್ ತರುಣ ಕುಮಾರ ಪಿಥೋಡೆ ಶನಿವಾರ ತಿಳಿಸಿದ್ದಾರೆ.
ಕೋವಿಡ್-19 ಸೋಂಕಿತ ಅಧಿಕಾರಿಯ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕ್ವಾರಂಟೈನ್ - ಜಿಲ್ಲಾ ಕಲೆಕ್ಟರ್
ಕೋವಿಡ್-19 ಸೋಂಕು ತಗುಲಿದ ಭೋಪಾಲ್ ಆರೋಗ್ಯ ಇಲಾಖೆಯ ನಿರ್ದೇಶಕ ಜೆ. ವಿಜಯಕುಮಾರ ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲ ಅಧಿಕಾರಿಗಳನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಭೋಪಾಲ್ ಜಿಲ್ಲಾ ಕಲೆಕ್ಟರ್ ತರುಣ ಕುಮಾರ ಪಿಥೋಡೆ ಶನಿವಾರ ಈ ವಿಷಯ ತಿಳಿಸಿದ್ದಾರೆ.
officers placed under quarantine
ಶನಿವಾರ ಭೋಪಾಲ್ನಲ್ಲಿ ಮತ್ತೆ 6 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಮಧ್ಯ ಪ್ರದೇಶದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 164 ಕ್ಕೇರಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಹೇಳಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 11 ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ.