ಪಂಚಕುಲ(ಹರಿಯಾಣ): ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಕೇಂದ್ರ ಸರ್ಕಾರ ಹೆಚ್ಚಿನ ಆಸ್ಥೆ ವಹಿಸಿದ್ದು, ಮರಳಿ ಭಾರತಕ್ಕೆ ಸೇರಿಸುವ ಯೋಚನೆ ಮಾಡಿದೆ ಎನ್ನುವ ಇಂಗಿತವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಹರಿಯಾಣದ ಪಂಚಕುಲದಲ್ಲಿ ಮಾತನಾಡಿದ ಸಿಂಗ್, ಪಾಕಿಸ್ತಾನ ಜೊತೆಗಿನ ಮುಂದಿನ ಮಾತುಕತೆ ಏನೇ ಇದ್ದರೂ ಅದು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಕುರಿತಾಗಿಯೇ ಇರಲಿದೆ ಎಂದಿದ್ದಾರೆ. ಕಾಶ್ಮೀರದ ಬೆಳವಣಿಗೆ ಬಗ್ಗೆ ಪಾಕಿಸ್ತಾನದ ನಡೆಗೆ ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ.
ಬಾಲಾಕೋಟ್ ದಾಳಿಗಿಂತ ದೊಡ್ಡ ದಾಳಿಯೊಂದಕ್ಕೆ ಭಾರತ ಸಜ್ಜಾಗುತ್ತಿದೆ ಎಂದು ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು, ಬಾಲಾಕೋಟ್ನಲ್ಲಿ ಏನು ನಡೆದಿದೆ ಎನ್ನುವುದು ಪಾಕಿಸ್ತಾನ ಒಪ್ಪಿಕೊಂಡಂತಾಗಿದೆ ಎಂದು ನೆರೆರಾಷ್ಟ್ರವನ್ನು ವ್ಯಂಗ್ಯ ಮಾಡಿದ್ದಾರೆ.
ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರಿಗರ ಒಳಿತಿಗಾಗಿ ಹಾಗೂ ಆ ರಾಜ್ಯದ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.