ಕರ್ನಾಟಕ

karnataka

ETV Bharat / bharat

ಭೂಪಟದಲ್ಲಿಲ್ಲದ ತಾಣಗಳಿಗೆ ಪ್ರವಾಸ, ಬುಡಕಟ್ಟು ಸಂಸ್ಕೃತಿ ಪರಿಚಯ.. ಈಗ ಇದೂ ಒಂಥರ ಟೂರಿಸಂ - comfort zone tour

ಟೂರ್​ ಅಂದ್ರೆ ಪ್ರವಾಸಿ ತಾಣಗಳಷ್ಟೇ ಅಲ್ಲ ಬುಡಕಟ್ಟು ಪ್ರದೇಶಗಳಲ್ಲೂ ನೋಡುವ, ತಿಳಿಯುವ ವಿಷಯಗಳಿವೆ ಎಂಬುದನ್ನು ನಾಟ್​ ಆನ್​ ಮ್ಯಾಪ್​ ಸಂಸ್ಥೆ ಜನರಿಗೆ ಪರಿಚಯ ಮಾಡಿಕೊಡುತ್ತಿದೆ. ಭೂಪಟದಲ್ಲಿ ಇಲ್ಲದ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮಗಳಿಗೆ ಪ್ರವಾಸಿಗರನ್ನು ಕರೆದೊಯ್ದು ಅವರಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸುತ್ತಿದೆ. ಇದು ಕಂ​ಫರ್ಟ್​ ಝೋನ್​ನಿಂದ ಹೊರಗೆ ಬಂದು ಮಾಡುವ ಟೂರ್​.

ನಾಟ್​ ಆನ್​ ಮ್ಯಾಪ್​ ಸಂಸ್ಥೆ

By

Published : Jun 20, 2019, 1:04 PM IST

ಹೈದರಾಬಾದ್: ನೀವು ಟೂರ್​ಗೆ ಎಂದು ಪ್ಲಾನ್​ ಮಾಡಿದ್ರೆ ಪ್ರವಾಸಿ ತಾಣಗಳ ಪಟ್ಟಿಯನ್ನು ಗೂಗಲ್​ ಮಾಡದೆ ಇರ್ತೀರಾ? ಖಂಡಿತ ಮಾಡದೇ ಇರೋಲ್ಲ.

ನಿಮಗ ಬೇಕಾದ ರೆಸಾರ್ಟ್​, ಅಲ್ಲಿ ಬೆಚ್ಚನೆ ಮಲಗುವ ವ್ಯವಸ್ಥೆ, ಬಿಸಿ ನೀರು, ಹತ್ತಿರದಲ್ಲೇ ಇರುವ ಪ್ರವಾಸಿ ತಾಣಗಳು ಇವೆಲ್ಲವನ್ನೂ ಒಮ್ಮೆ ಪಟ್ಟಿ ಮಾಡಿಕೊಂಡು ಮನೆಯಿಂದ ಹೊರಡುತ್ತೀರಾ.

ಒಮ್ಮೆ ಯೋಚಿಸಿ, ನಿಮ್ಮ ಕಂ​ಫರ್ಟ್​ ಝೋನ್​ನಿಂದ ಹೊರಗೆ ಹೋಗಿ ಪ್ರಯಾಣ ಮಾಡಿದ್ರೆ ಹೇಗಿರುತ್ತೆ? ಯಾವುದೇ ಪ್ರವಾಸಿ ತಾಣಗಳಿಗಲ್ಲ. ಪಕ್ಕಾ ಒಂದು ಬುಡಕಟ್ಟು ಪ್ರದೇಶಕ್ಕೆ ಟೂರ್​ಗೆ ಹೋದ್ರೆ ನೀವು ಅಲ್ಲಿನ ಜನರನ್ನು ನಿಭಾಯಿಸಬಲ್ಲಿರಾ? ಅವರು ಕೊಡುವ ಊಟ, ತಿಂಡಿಯಿಂದ ತೃಪ್ತರಾಗುತ್ತೀರಾ? ಪ್ರಕೃತಿ ಮಡಿಲಲ್ಲೇ ಇದ್ದರೂ ಸೌಕರ್ಯ ವಂಚಿತವಾಗುವ ಊರುಗಳಿಗೆ ಏನಾದ್ರೂ ಸಹಾಯ ಮಾಡಬಲ್ಲಿರಾ?

ಸುತ್ತಮುತ್ತಲಿನಲ್ಲಿರುವ ಪ್ರಕೃತಿ ವಿಸ್ಮಯ

ಇಂಥ ಒಂದು ಟೂರಿಸಂ ಭಾರತದಲ್ಲಿ ಟ್ರೆಂಡ್ ಆಗುತ್ತಿದೆ. ನೀವು ಕೇಳಿರದ, ಇದು ಪ್ರವಾಸಿ ತಾಣವೇ ಅಲ್ಲ ಎಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮಗಳಿಗೆ ಪ್ರವಾಸಿಗರನ್ನು ಕರೆದೊಯ್ದು ಅವರ ಮುಗ್ದತೆ ಪರಿಚಯ ಮಾಡಿಕೊಡುವುದು. ಜೊತೆಗೆ ಅವರು ವಾಸಿಸುತ್ತಿರುವ ಊರಿನ ಪರಿಚಯ ಮಾಡಿಕೊಡುವುದು. ಸುತ್ತಮುತ್ತಲೂ ಇರುವ ಪ್ರಕೃತಿ ವಿಸ್ಮಯಗಳನ್ನು ತೋರುವುದು, ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ಇದು ಕಂ​​ಫರ್ಟ್​ ಝೋನ್​ನಿಂದ ಹೊರಬಂದು ಮಾಡುವ ಪ್ರವಾಸ.

ನಾಟ್​ ಆನ್​ ಮ್ಯಾಪ್​ ಎಂಬ ಸಂಸ್ಥೆ ಪ್ರವಾಸಿಗರಿಗೆ ಇಂತಹ ಸ್ಥಳಗಳನ್ನು ಪರಿಚಯ ಮಾಡಿಕೊಡುತ್ತಿದೆ. ಹಿಮಾಚಲ ಪ್ರದೇಶ, ನಾಗಾಲ್ಯಾಂಡ್​, ಪಂಜಾಬ್​ ಇವೇ ಮೊದಲಾದ ಊರುಗಳಿಗೆ ಸೀಮಿತವಾಗಿದ್ದ ಈ ಸಂಸ್ಥೆಯ ಟೂರಿಸಂ ಸ್ಪಾಟ್​ಗಳು ಈಗ ದಕ್ಷಿಣ ಭಾರತಕ್ಕೂ ವಿಸ್ತರಣೆಯಾಗುತ್ತಿವೆಯಂತೆ.

ಈ ಸಂಸ್ಥೆಯ ಕಾನ್ಸೆಪ್ಟ್​ ವಿದೇಶಿಗರನ್ನೂ ಸೆಳೆದಿದ್ದು, ತಂತ್ರಜ್ಞಾನ ಸೋಕದ, ಬಾಹ್ಯ ಜಗತ್ತಿನಿಂದ ಪ್ರಭಾವಿತವಾಗದ ಇನ್ನೂ ತನ್ನ ಮೂಲ ಸತ್ವವನ್ನೇ ಉಳಿಸಿಕೊಂಡಿರುವ ಸಂಸ್ಕೃತಿ, ಊಟ, ಕಲೆಯನ್ನು ನೋಡ ಬಯಸುವವರಿಗೆ ಇದೊಂದು ಸೌಭಾಗ್ಯವೇ ಸರಿ.

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮಗಳನ್ನು ತೋರುಸುತ್ತಿರುವ ನಾಟ್​ ಆನ್​ ಮ್ಯಾಪ್​ ಸಂಸ್ಥೆ

ವಿದೇಶಿಗರು ಇದನ್ನೇ ಹುಡುಕಿಕೊಂಡು ಭಾರತಕ್ಕೆ ಬರುತ್ತಾರೆ. ಆದ್ರೆ, ಅವರಿಗೆ ಸಿಗುವ ಸ್ಥಳಗಳು ತಮ್ಮ ದೇಶಕ್ಕಿಂತ ವಿಭಿನ್ನವಾಗೇನಿಲ್ಲ. ಹಾಗಾಗಿ ನಿರಾಶೆಯಿಂದಲೇ ವಾಪಸ್​ ತಮ್ಮ ದೇಶಕ್ಕೆ ತೆರಳುತ್ತಾರೆ. ಇನ್ನು ಟೆಕ್ನಾಲಜಿ, ಮೊಬೈಲ್​, ನಿತ್ಯದ ಕೆಲಸದಿಂದ ಜಂಜಾಟಕ್ಕೆ ಸಿಲುಕಿರುವವರು ಇಂತಹ ಸ್ಥಳಗಳಲ್ಲಿ ಉಳಿಯಲು ಬಯಸುತ್ತಾರೆ. ಇವರಿಗಾಗಿಯೇ ನಾಟ್​ ಆನ್​ ಮ್ಯಾಪ್​ ಸ್ಥಳಗಳನ್ನು ಗುರುತಿಸಿ ಅಲ್ಲಿ ತಂಗಲು ಅವಕಾಶ ಮಾಡಿಕೊಡುತ್ತಿದೆ.

ಕಲೆಯನ್ನು ನೋಡ ಬಯಸುವವರಿಗೆ ಇದೊಂದು ಸೌಭಾಗ್ಯ

ಹಳ್ಳಿಗಳ ಉದ್ಧಾರ: ನಾಟ್​ ಆನ್​ ಮ್ಯಾಪ್​ ತನ್ನ ತನ್ನ ಗ್ರಾಹಕರಿಂದ ಸಂಗ್ರಹವಾಗುತ್ತಿರುವ ಹಣದಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಹಳ್ಳಿಗಳ ಉದ್ಧಾರಕ್ಕಾಗಿ ಬಳಸುತ್ತಿದೆ. ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ಊರುಗಳಲ್ಲಿ ನೀರು, ವಿದ್ಯುತ್​ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ.

ಬುಡಕಟ್ಟು ಜನರ ಮನೆಯಲ್ಲಿ ವಾಸ:ನಾಟ್​ ಆನ್​ ಮ್ಯಾಪ್​ ತಾನು ಪಟ್ಟಿ ಮಾಡಿರುವ ಊರುಗಳಲ್ಲಿ ಹೋಮ್​ ಸ್ಟೇ ಅಥವಾ ರೆಸಾರ್ಟ್​ಗಳನ್ನು ನಿರ್ಮಿಸಿಲ್ಲ. ಬದಲಾಗಿ ಅಲ್ಲೇ ವಾಸವಿರುವ ಜನರ ಮನೆಯಲ್ಲಿ ಉಳಿಸಿ, ಅವರು ತಿನ್ನುವ ಆಹಾರವನ್ನೇ ತನ್ನ ಗ್ರಾಹಕರಿಗೆ ಕೊಡಿಸುತ್ತಿದೆ.

ಪ್ರವಾಸಿಗರನ್ನು ಕರೆದೊಯ್ದು ಅವರ ಮುಗ್ದತೆ ಪರಿಚಯ ಮಾಡಿಕೊಡುವ ನಾಟ್​ ಆನ್​ ಮ್ಯಾಪ್​ ಸಂಸ್ಥೆ

ಭಾಷೆ ಹೇಗೆ?:ಬುಡಕಟ್ಟು ಜನರಿಗೆ ಇಂಗ್ಲಿಷ್​ ಗೊತ್ತಿಲ್ಲದ ಕಾರಣ ನಾಟ್​ಆನ್​ ಮ್ಯಾಪ್​ ಸಂಸ್ಥೆಯು ಗ್ರಾಮಾಂತರ ಪ್ರದೇಶದ ಜನರಿಗೆ ಇಂಗ್ಲಿಷ್​ ಕಲಿಸುತ್ತಿದ್ದು, ಈ ಮೂಲಕ ಪ್ರವಾಸಿಗರಿಗೆ ತಮ್ಮ ಊರಿನ ಬಗ್ಗೆ ಇಂಗ್ಲಿಷ್​ನಲ್ಲಿ ವಿವರಿಸುವ ತರಬೇತಿ ನೀಡುತ್ತಿದೆ.

ABOUT THE AUTHOR

...view details