ಬರೂಚ್:ಪುಲ್ವಾಮಾ ಸಿಆರ್‌ಪಿಎಫ್ ಹುತಾತ್ಮರ ಕುಟುಂಬಗಳಿಗೆ ನೆರವು ನೀಡಲು ಚಾರಿಟಿವೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದನ ಮೇಲೆ ನೋಟಿನ ಮಳೆಯೇ ಹರಿಸಿದ ಅಪರೂಪದ ಘಟನೆ ಗುಜರಾತ್‌ನ ಬರೂಚ್‌ನಲ್ಲಿ ನಡೆದಿದೆ.
CRPF ಹುತಾತ್ಮರ ಕುಟುಂಬಗಳಿಗೆ ನೋಟಿನ ಮಳೆ ಸುರಿಯಿತು.. - news kannada
ಬರೋಚ್‌ನಲ್ಲಿರುವ ಕಲಾವಿದನೋರ್ವ ಸಹ ಹಣ ಸಂಗ್ರಹಿಸಿ ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವ ಮೂಲಕ ದೇಶಭಕ್ತಿಗೆ ಮಾದರಿಯಾಗಿದ್ದಾರೆ.
ಫೆಬ್ರವರಿ 14ರಂದು ನಡೆದ ಜೆಇಎಂ ಉಗ್ರರ ದಾಳಿಯಲ್ಲಿ ಹುತಾತ್ಮರಾದ 44 ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ನೆರವಿನ ಮಹಾಪೂರ ಇನ್ನೂ ನಿಂತಿಲ್ಲ. ಬರೂಚ್‌ನಲ್ಲಿ ಚಾರಿಟಿವೊಂದು ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು. ಈ ಇವೆಂಟ್‌ಗೆ ಯಾವುದೇ ಪ್ರವೇಶ ಫೀ ಇರಲಿಲ್ಲ. ಆದ್ರೇ, ಕಲಾವಿದನ ಮೇಲೆ ಸಂಗೀತಾಸಕ್ತರು ನೋಟಿನ ಮಳೆಯನ್ನೇ ಸುರಿಸಿದ್ದಾರೆ.
ನಿನ್ನೆ ಭಾನುವಾರ ಸಂಜೆ 'ಏಕ್ ಶಾಮ್ ಶಹೀದೋಂಕೇ ನಾಮ್' ಅನ್ನೋ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಿತು. ಹಾಡಲು ಬಂದ ಕಲಾವಿದ ಸಂಭಾವನೆ ರೂಪದಲ್ಲಿ ಒಂದೇ ಒಂದು ರೂಪಾಯಿ ಪಡೆದಿರಲಿಲ್ಲ. ಉಚಿತವಾಗಿಯೇ ಕಾರ್ಯಕ್ರಮ ನೀಡಿ ದೇಶಭಕ್ತಿ ತೋರ್ಪಡಿಸಿದ್ದಾರೆ. ದೇಶಭಕ್ತಿ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆಯೋರ ಮಧ್ಯೆ ಬರೋಚ್‌ನಲ್ಲಿರುವ ಚಾರಿಟಿ ಹಾಗೂ ಕಲಾವಿದ ಸಹ ಹಣ ಸಂಗ್ರಹಿಸಿ ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವ ಮೂಲಕ ದೇಶಭಕ್ತಿಗೆ ಮಾದರಿಯಾಗಿದ್ದಾರೆ.